Home News ಶಿಡ್ಲಘಟ್ಟ ತಾಲ್ಲೂಕಿನಲ್ಲಿ 2,708 ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆಯಲಿದ್ದಾರೆ

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 2,708 ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆಯಲಿದ್ದಾರೆ

0

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್‌ 30 ರಂದು ಪ್ರಾರಂಭವಾಗಿ ಏಪ್ರಿಲ್‌ 12 ರವರೆಗೂ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ಹಾಗೂ ಜಿಲ್ಲಾ ಮಟ್ಟದ ಒಬ್ಬ ಅಧಿಕಾರಿಯನ್ನು ತಾಲ್ಲೂಕು ವೀಕ್ಷಕರನ್ನಾಗಿ ಜಿಲ್ಲಾಧಿಕಾರಿಗಳು ನಿಯೋಜಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಹಂತದ ಎರಡು ಜಾಗೃತ ತಂಡಗಳು ಕಾರ್ಯನಿರ್ವಹಿಸುತ್ತವೆ. ತಹಶೀಲ್ದಾರ್‌, ಕಾರ್ಯನಿರ್ವಾಹಣಾಧಿಕಾರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದ ತಾಲ್ಲೂಕು ಮಟ್ಟದ ಜಾಗೃತಿ ದಳ ಸಹ ಇರುತ್ತದೆ.
ತಾಲ್ಲೂಕಿನಲ್ಲಿ ಒಟ್ಟು 11 ಪರೀಕ್ಷಾ ಕೇಂದ್ರಗಳಿರುತ್ತವೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ಪ್ರಶ್ನೆ ಪತ್ರಿಕೆಗಳ ಅಭಿರಕ್ಷಕರನ್ನು ಮಂಡಳಿಯಿಂದ ನಿಯೋಜಿಸಲಾಗಿದೆ.
ಪರೀಕ್ಷಾ ಕೇಂದ್ರಗಳು: ಸರ್ಕಾರಿ ಪ್ರೌಢಶಾಲೆ ಜಂಗಮಕೋಟೆ (252 ವಿದ್ಯಾರ್ಥಿಗಳು), ಸರ್ಕಾರಿ ಪ್ರೌಢಶಾಲೆ ಶಿಡ್ಲಘಟ್ಟ (335 ವಿದ್ಯಾರ್ಥಿಗಳು), ಸರ್ಕಾರಿ ಪ್ರೌಢಶಾಲೆ ಬಶೆಟ್ಟಹಳ್ಳಿ (212 ವಿದ್ಯಾರ್ಥಿಗಳು), ಸರ್ಕಾರಿ ಪ್ರೌಢಶಾಲೆ ಮೇಲೂರು (153 ವಿದ್ಯಾರ್ಥಿಗಳು), ಮೊರಾರ್ಜಿದೇಸಾಯಿ ವಸತಿ ಶಾಲೆ 11ನೇ ಮೈಲಿ (207 ವಿದ್ಯಾರ್ಥಿಗಳು), ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪುರಬೈರನಹಳ್ಳಿ (210 ವಿದ್ಯಾರ್ಥಿಗಳು), ಶ್ರೀಸ್ವಾಮಿ ವಿವೇಕಾನಂದ ಪ್ರೌಢಶಾಲೆ ಮಳ್ಳೂರು (224 ವಿದ್ಯಾರ್ಥಿಗಳು), ಶ್ರೀ ವಾಸವಿ ಪ್ರೌಢಶಾಲೆ (229), ಬಿಜಿಎಸ್‌ ಪ್ರೌಢಶಾಲೆ ಹನುಮಂತಪುರ(340), ಡಾಲ್ಫಿನ್ಸ್‌ ಪ್ರೌಢಶಾಲೆ ನೆಲ್ಲೀಮರದಹಳ್ಳಿ (175), ಶ್ರೀ ಜ್ಯೋತಿ ಪ್ರೌಢಶಾಲೆ ಜಂಗಮಕೋಟೆ (171).
ತಾಲ್ಲೂಕಿನಲ್ಲಿ 1,381 ಗಂಡು ಮಕ್ಕಳು, 1,327 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 2,708 ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ.
ಮಾರ್ಚ್‌ 30 ರಂದು ಪ್ರಥಮ ಭಾಷೆ, ಏಪ್ರಿಲ್‌ 1 ರಂದು ಅರ್ಥಶಾಸ್ತ್ರ (ಸರ್ಕಾರಿ ಪ್ರೌಢಶಾಲೆ ಶಿಡ್ಲಘಟ್ಟ ಕೇಂದ್ರದಲ್ಲಿ ಮಾತ್ರ), ಏಪ್ರಿಲ್‌ 3 ರಂದು ಗಣಿತ, ಏಪ್ರಿಲ್‌ 5 ರಂದು ದ್ವಿತೀಯ ಭಾಷೆ, ಏಪ್ರಿಲ್‌ 7 ರಂದು ವಿಜ್ಞಾನ, ಏಪ್ರಿಲ್‌ 10 ರಂದು ತೃತೀಯ ಭಾಷೆ, ಏಪ್ರಿಲ್‌ 12 ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿದ್ದು, ವಿದ್ಯಾರ್ಥಿಗಳು ಪರೀಕ್ಷೆಗೆ ಬೆಳಿಗ್ಗೆ 9.30 ಗಂಟೆಯ ಒಳಗೆ ಹಾಜರಿರಬೇಕು. ತಡವಾಗಿ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಬರಲು ಅವಕಾಶ ಇರುವುದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ತಿಳಿಸಿದ್ದಾರೆ.