ದೇಶದ ಪ್ರಾಚೀನ ಕಲೆಯಾದ ಕುಸ್ತಿಯನ್ನು ಉಳಿಸಿ ಬೆಳೆಸುವ ಮೂಲಕ ಯುವಕರು ಆರೋಗ್ಯವಂತ ಸಮಾಜ ನಿರ್ಮಿಸಬೇಕು ಎಂದು ಕುಸ್ತಿ ಪೈಲ್ವಾನ್ ಶ್ರೀನಿವಾಸ್ ಹೇಳಿದರು.
ನಗರದ ಕುರುಬರಪೇಟೆಯ ಶ್ರೀರಾಮ ಗರಡಿ ಮನೆಯಲ್ಲಿ ಶ್ರೀರಾಮ ಯುವಕರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಕುಸ್ತಿಪಟುಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಗರದ ಕುರುಬರಪೇಟೆಯ ಪೈಲ್ವಾನ್ ಮುನಿಶಾಮಪ್ಪನವರು 1983ರಲ್ಲಿ ಕುರುಬರ ಪೇಟೆಯ ಶ್ರೀರಾಮ ದೇವಾಲಯದ ಬಳಿ ಶ್ರೀರಾಮ ಗರಡಿ ಯುವಕರ ಸಂಘವನ್ನು ಸ್ಥಾಪಿಸಿ ನಗರದ ಹಲವಾರು ಯುವಕರಿಗೆ ಗರಡಿ ಕಲಿಸುವುದಷ್ಟೇ ಅಲ್ಲದೇ ಗರಡಿ ಮನೆಗೆ ಅಗತ್ಯವಾದ ಕಸರತ್ತಿನ ಸಾಮಾಗ್ರಿಗಳಾದ ಗುಂಡು, ಡಂಬಲ್ಸ್, ಬಲದಂಡುಗಳು, ಕರಾಟಾ ತುಂಡು, ಕೆಮ್ಮಣ್ಣಿನ ಗೋದಾಮುಗಳನ್ನು ಗರಡಿ ಮನೆಯಲ್ಲಿ ಸಜ್ಜುಗೊಳಿಸಿ ನಗರದ ಹಲವಾರು ಯುವಕರನ್ನು ಗರಡಿ ಪಟುಗಳನ್ನಾಗಿ ತಯಾರು ಮಾಡಿದ್ದಾರೆ ಎಂದರು.
ಅವರು ಅಂದು ಶುರು ಮಾಡಿದ ಗರಡಿ ಮನೆಯಿಂದ ನಗರದ ಸಾಕಷ್ಟು ಯುವಕರು ತಾಲೂಕು, ಜಿಲ್ಲೆ, ರಾಜ್ಯ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ಕುಸ್ತಿಪಟುಗಳಾಗಿ ಗುರುತಿಸಿಕೊಳ್ಳುವಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಪೈಲ್ವಾನ್ ಮುನಿಶಾಮಪ್ಪ, ಪೈಲ್ಮಾನ್ ಇಮಾನ್ ದಾದಾ, ಶ್ರೀನಿವಾಸ್, ಮಾಹಿತಿ ಹಕ್ಕುಗಳ ಜಾಗೃತಿ ಸಮಿತಿಯ ಪ್ರದೀಪ್, ಮಡಿವಾಳ ಮಾಚಿದೇವ ಸಂಘದ ರಾಜ್ಯ ಉಪಾಧ್ಯಕ್ಷ ರಾಜಣ್ಣ, ಕೃಷ್ಣಪ್ಪ, ಮುನಿರಾಜು, ನಾಗರಾಜು, ಪಿ.ಎಂ.ಗಂಗಾದರ, ರಾಮಚಂದ್ರಪ್ಪ, ಮೂರ್ತಿ, ರಮೇಶ್, ವೆಂಕಟೇಶ್, ಕೇಶವ, ಮಹೇಶ್, ಮತ್ತಿತರರು ಇದ್ದರು.