Home News ಸವಲತ್ತುಗಳಿಲ್ಲವಾದರೂ ಕ್ರೀಡೆಯಲ್ಲಿ ಕಿರೀಟ

ಸವಲತ್ತುಗಳಿಲ್ಲವಾದರೂ ಕ್ರೀಡೆಯಲ್ಲಿ ಕಿರೀಟ

0

ತಾಲೂಕಿನಲ್ಲಿ ಕ್ರೀಡಾಪಟುಗಳಿಗೆ ಬೇಕಾದಂತಹ ಯಾವುದೇ ಸವಲತ್ತುಗಳಿಲ್ಲವಾದರೂ ಬಹಳಷ್ಟು ಕ್ರೀಡಾಪಟುಗಳು ಜಿಲ್ಲೆ, ರಾಜ್ಯ ಹಾಗು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮೂಲಕ ತಾಲೂಕಿಗೆ ಕೀರ್ತಿ ತಂದಿರುವುದು ಸಂತಸದ ವಿಷಯ ಎಂದು ರಾಷ್ಟ್ರೀಯ ಅಥ್ಲೆಟಿಕ್ ಪಟು ನಾರಾಯಣಸ್ವಾಮಿ ಹೇಳಿದರು.
ಈಚೆಗೆ ಗುಜರಾತ್‍ನ ಸೂರತ್‍ನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ(ಕುಡೊ) ಸ್ವರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಹಾಗು ಐದನೇ ಸ್ಥಾನ ಪಡೆದಿರುವ ತಾಲೂಕಿನ ಇಬ್ಬರು ಕಿರಿಯ ಕ್ರೀಡಾಪಟುಗಳಾದ ಟಿ.ಎನ್. ಹೇಮಂತ್ ಹಾಗು ಗೋಕುಲ್‍ಗೌಡ ರನ್ನು ಶನಿವಾರ ನಗರದ ನೆಹರೂ ಕ್ರೀಡಾಂಗಣದಲ್ಲಿ ಸನ್ಮಾನಿಸಿ ಮಾತನಾಡಿದರು.
ತಾಲೂಕಿನಾಧ್ಯಂತ ಸಾಕಷ್ಟು ಮಂದಿ ಕ್ರೀಡಾಸಕ್ತರಿದ್ದು ಸರಕಾರ ಹಾಗು ಕ್ರೀಡಾ ಇಲಾಖೆ ಕ್ರೀಡಾಪಟುಗಳಿಗೆ ಬೇಕಾದ ಇನ್ನಷ್ಟು ಪ್ರೋತ್ಸಾಹ ನೀಡಿದಲ್ಲಿ ಮತ್ತಷ್ಟು ಕ್ರೀಡಾಪಟುಗಳು ತಾಲೂಕಿಗೆ ಕೀರ್ತಿ ತರುವಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕ್ರೀಡಾಪಟುಗಳಾದ ಟಿ.ಟಿ. ನರಸಿಂಹಪ್ಪ, ಜಯಚಂದ್ರ, ಮಧು, ಜಬಿವುಲ್ಲಾ, ಜಯಚಂದ್ರ, ನಿರಂಜನ್, ಸುರೇಶ್, ಮುರಳಿ, ಮುಕೇಶ್ ಮತ್ತಿತರರು ಹಾಜರಿದ್ದರು.

error: Content is protected !!