Home News ಸಾದಲಿ ಹೊಸಕೆರೆ ಕೋಡಿ ಹರಿದಿದೆ

ಸಾದಲಿ ಹೊಸಕೆರೆ ಕೋಡಿ ಹರಿದಿದೆ

0

ಕಳೆದ 15 ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಭಾನುವಾರ ತಾಲ್ಲೂಕಿನ ಸಾದಲಿ ಹೊಸಕೆರೆ ಸುಮಾರು 8 ವರ್ಷಗಳ ನಂತರ ತುಂಬಿ ಹರಿದಿದೆ. ಉತ್ತಾರ ಪೆನ್ನಾರ್ ನದೀ ಕಣಿವೆ ಪ್ರದೇಶದಲ್ಲಿರುವ ಸಾದಲಿ ಹೊಸಕೆರೆ ಅಚ್ಚುಕಟ್ಟು 45 ಹೆಕ್ಟೇರ್ಗಳಷ್ಟಿದೆ. ಈ ಕೆರೆಯ ನೀರಿನ ಶೇಖರಣೆ ಪ್ರದೇಶ 4.21 ಹೆಕ್ಟೇರ್ಗಳಷ್ಟಿದೆ.
23nov3‘ತಾಲ್ಲೂಕಿನ ಸಾದಲಿ ಮತ್ತು ಎಸ್.ದೇವಗಾನಹಳ್ಳಿ ಪಂಚಾಯತಿ ವ್ಯಾಪ್ತಿಗೆ ಬರುವ ಹಲವು ಕೆರೆಗಳು ತುಂಬಿದ್ದು ಈ ಭಾಗದ ಜನರ ಹರ್ಷಕ್ಕೆ ಕಾರಣವಾಗಿವೆ. ಎಸ್.ದೇವಗಾನಹಳ್ಳಿ ಪಂಚಾಯತಿಯ ಇರಗಪ್ಪನಹಳ್ಳಿ ಕೆರೆಯೂ ತುಂಬಿದೆ. ಈ ಭಾಗದ ಅಕ್ಕಯ್ಯಗಾರು ಕೆರೆ ಮತ್ತು ಎಸ್.ಗೊಲ್ಲಹಳ್ಳಿ ಕೆರೆಗಳು ತುಂಬಿ ಕೋಡಿ ಹರಿದು ಸಾದಲಿ ಹೊಸಕೆರೆಗೆ ನೀರು ಹರಿದು ಬಂದು ಈಗ ಈ ಕೆರೆಯೂ ತುಂಬಿ ಕೋಡಿ ಹರಿದಿದೆ. ಸಾದಲಿ ಹೊಸಕೆರೆ ತುಂಬಿ ಹರಿಯುವ ನೀರು ಸಾದಲಿ ಸಾದಲಮ್ಮನಕೆರೆಗೆ ಹರಿಯುತ್ತದೆ, ಅಲ್ಲಿಂದ ಮುಂದೆ ರಾಮಸಮುದ್ರದ ಕಡೆಗೆ ನೀರು ಹರಿದುಹೋಗುತ್ತದೆ. ರಾಮಸಮುದ್ರ ಕೆರೆ ಅತ್ಯಂತ ದೊಡ್ಡದಾಗಿದ್ದು ತುಂಬಲು ಇನ್ನೂ 14 ಅಡಿ ಬಾಕಿಯಿದೆ’ ಎಂದು ನಿವೃತ್ತ ಶಿಕ್ಷಕ ಕೆ.ಎನ್. ಲಕ್ಷ್ಮೀನಾರಾಯಣ ತಿಳಿಸಿದರು.

error: Content is protected !!