Home News ಸ್ವಯಂ ಪ್ರೇರಿತ ರಕ್ತದಾನ ಶಿಬಿರ: ಈದ್ ಮಿಲಾದ್ ಅಂಗವಾಗಿ ಆಯೋಜನೆ: 205 ಯೂನಿಟ್ ರಕ್ತ ಸಂಗ್ರಹ

ಸ್ವಯಂ ಪ್ರೇರಿತ ರಕ್ತದಾನ ಶಿಬಿರ: ಈದ್ ಮಿಲಾದ್ ಅಂಗವಾಗಿ ಆಯೋಜನೆ: 205 ಯೂನಿಟ್ ರಕ್ತ ಸಂಗ್ರಹ

0

ಇತ್ತೀಚಿನ ದಿನಗಳಲ್ಲಿ ಯುವ ಸಮೂಹದಲ್ಲಿ ರಕ್ತದಾನ ಕುರಿತು ಜಾಗೃತಿ ಮೂಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರವಿಶಂಕರ್ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬುಧವಾರ ಈದ್ ಮಿಲಾದ್ ಅಂಗವಾಗಿ ಟಿಪ್ಪು ಸುಲ್ತಾನ್ ಅಸೋಸಿಯೇನ್, ಖಾನ್ಸ್ ಪ್ರೆಂಡ್ಸ್, ಎಂಸಿಸಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಬ್ಬರು ಒಂದು ಯೂನಿಟ್ ರಕ್ತ ನೀಡಿದರೆ ಅದು ಅಗತ್ಯ ಇರುವ ನಾಲ್ಕು ಮಂದಿಗೆ ಬೇರೆ ಬೇರೆ ರೂಪದಲ್ಲಿ ನೆರವಾಗಲಿದೆ. ತುರ್ತು ಪರಿಸ್ಥಿತಿಯಲ್ಲಿ ಅಗತ್ಯ ಇರುವವರಿಗೆ ರಕ್ತ ನೀಡುವಂತ ರಕ್ತದಾನಕ್ಕಿಂತಲೂ ಮಿಗಿಲಾದ ದಾನ ಮತ್ತೊಂದು ಇಲ್ಲ ಎಂದು ಹೇಳಿದರು.
ಹೆಚ್ಚು ಹೆಚ್ಚು ಮಂದಿ ರಕ್ತದಾನದಲ್ಲಿ ತೊಡಗಿಸಿಕೊಳ್ಳುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ರಕ್ತದ ಕೊರತೆಯಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ರಕ್ತದಾನ ಶಿಬಿರದಲ್ಲಿ ೨೦೫ ಯೂನಿಟ್ ರಕ್ತ ಸಂಗ್ರಹವಾಯಿತು. ಎಲ್ಲ ರಕ್ತದಾನಿಗಳಿಗೂ ಹಣ್ಣು, ಹಣ್ಣಿನ ರಸ ಮತ್ತು ಅಭಿನಂದನಾ ಪತ್ರವನ್ನು ವಿತರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಂದಮುನಿಕೃಷ್ಣಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಸಾಧಿಕ್, ಪಂಪ್‌ನಾಗರಾಜ್, ಶ್ರೀನಾಥ್, ಸಮೀರ್, ಅತೀಫ್, ಬಾಬಾ, ರೆಡ್‌ಕ್ರಾಸ್‌ ಸೊಸೈಟಿ ತಾಲ್ಲೂಕು ಕಾರ್ಯದರ್ಶಿ ಗುರುರಾಜರಾವ್‌ ಮತ್ತಿತರರು ಹಾಜರಿದ್ದರು.

error: Content is protected !!