Home News ಹಜ್‌ರತ್ ಖ್ವಾಜಾ ಅಜೀಮ್ ಅಲಿ ಷಾ ಚಿಸ್ತಿ ದರ್ಗಾದಲ್ಲಿ ಗಂಧದ ಅಭಿಷೇಕ

ಹಜ್‌ರತ್ ಖ್ವಾಜಾ ಅಜೀಮ್ ಅಲಿ ಷಾ ಚಿಸ್ತಿ ದರ್ಗಾದಲ್ಲಿ ಗಂಧದ ಅಭಿಷೇಕ

0

ಹಜ್‌ರತ್ ಖ್ವಾಜಾ ಅಜೀಮ್ ಅಲಿ ಷಾ ಚಿಸ್ತಿ ಅನುಯಾಯಿಗಳು ರಾಜೀವ್‌ಗಾಂಧಿ ಲೇಔಟ್‌ನಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬುಧವಾರ ಮೆರವಣಿಗೆಯಲ್ಲಿ ಸಾಗಿದರು. ದರ್ಗಾದಲ್ಲಿ ನಡೆಸುವ ಗಂಧದ ಅಭಿಷೇಕಕ್ಕೆ ಬೇಕಾದ ಪೂಜಾ ಸಾಮಗ್ರಿಗಳನ್ನು ಅಲಂಕರಿಸಿಕೊಂಡು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ದರ್ಗಾದಲ್ಲಿ ಹೊದಿಸುವ ಚಾದರ್, ಮಲ್ಲಿಗೆ ಹೂಗಳು, ಮೆಕ್ಕಾ ಮುಂತಾದ ವಿವಿಧ ದರ್ಗಾಗಳ ಪ್ರತಿಕೃತಿಗಳು ವಾದ್ಯವೃಂದದೊಂದಿಗೆ ಸಾಗಿದವು. ಕೇಸರಿ ಮತ್ತು ಹಸಿರು ಬಣ್ಣದ ಉಡುಪುಗಳನ್ನು ಧರಿಸಿಕೊಂಡು ಪೂಜೆ ನಡೆಸುವ ಫಕ್ರಾಗಳ ಡೋಲಿನ ವಾದನದೊಂದಿಗೆ ರಸ್ತೆಯಲ್ಲಿ ಸಾಗಿದಾಗ ಆಕರ್ಷಕವಾಗಿ ಕಂಡುಬಂದಿತು.
ಹಜ್‌ರತ್ ಖ್ವಾಜಾ ಅಜೀಮ್ ಅಲಿ ಷಾ ಚಿಸ್ತಿ ಟ್ರಸ್ಟ್ ಅಧ್ಯಕ್ಷ ಮಹಮ್ಮದ್ ಅಸ್ಲಂ, ಉಪಾಧ್ಯಕ್ಷ ನಸೀರ್ ಅಹ್ಮದ್, ಕಾರ್ಯದರ್ಶಿ ನಿಜಾಮುದ್ದೀನ್, ಷೇಕ್‌ಹುಸೇನ್, ಫಕ್ರುದ್ದೀನ್ ಸಾಬ್, ಸಯ್ಯದ್ ನಯಾಜ್, ಅಲೀಖಾನ್, ಅಮ್ಜದ್ ಖಾನ್, ಸುಭಾನ್, ರಿಯಾಜ್ ಮತ್ತಿತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

error: Content is protected !!