Home News ಹಲ್ಲೆಯನ್ನು ಖಂಡಿಸಿ ಕಲಾಪದಿಂದ ಹೊರಗುಳಿದ ವಕೀಲರು

ಹಲ್ಲೆಯನ್ನು ಖಂಡಿಸಿ ಕಲಾಪದಿಂದ ಹೊರಗುಳಿದ ವಕೀಲರು

0

ನ್ಯಾಯಾಂಗ ಇಲಾಖೆಯಲ್ಲಿನ ನ್ಯಾಯಮೂರ್ತಿಗಳಿಗೆ ಸೂಕ್ತ ಭದ್ರತೆ ಇಲ್ಲದೆ ಕಾರ್ಯ ನಿರ್ವಹಿಸುವುದು ಇನ್ನು ಮುಂದೆ ದುಸ್ತರವಾಗುವ ಲಕ್ಷಣಗಳು ರಾಜ್ಯದಲ್ಲಿ ಗೋಚರಿಸುತ್ತಿದೆ ಎಂದು ತಾಲ್ಲೂಕು ವಕೀಲರ ಸಂಘದ ಗೌರವಾಧ್ಯಕ್ಷ ಪಾಪಿರೆಡ್ಡಿ ತಿಳಿಸಿದರು.
ನಗರದ ನ್ಯಾಯಾಲಯದಲ್ಲಿ ಗುರುವಾರ ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಲೋಕಾಯುಕ್ತ ನ್ಯಾಯಮೂರ್ತಿಗಳ ಮೇಲೆ ಆದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಅವರು ಮಾತನಾಡಿದರು.
ಬೆಂಗಳೂರು ಬಹುಮಹಡಿಗಳ ಕಟ್ಟಡದಲ್ಲಿರುವ ಲೋಕಾಯುಕ್ತ ಕಚೇರಿಯಲ್ಲಿ ರಾಜ್ಯದ ಲೋಕಾಯುಕ್ತರಾದ ನ್ಯಾಯಮೂರ್ತಿ ಪಿ.ವಿಶ್ವನಾಥಶೆಟ್ಟಿ ಅವರ ಮೇಲೆ ಅವರ ಕಚೇರಿಯಲ್ಲಿಯೇ ಮಾರಣಾಂತಿಕ ಹಲ್ಲೆ ನಡೆದಿದೆ. ಲೋಕಾಯುಕ್ತ ಕಚೇರಿಗೆ ಸೂಕ್ತ ಭದ್ರತೆ ನೀಡಿದ್ದರೂ ಸಹ ಭದ್ರತೆಯ ವೈಫಲ್ಯದಿಂದಾಗಿ ನ್ಯಾಯಮೂರ್ತಿಗಳ ಮೇಲೆ ಹಲ್ಲೆ ನಡೆದಿರುವುದು ಇಡೀ ವಕೀಲ ಸಮುದಾಯಕ್ಕೆ ತೀರಾ ಆಕ್ರೋಶ ಮತ್ತು ದುಃಖವನ್ನು ತಂದಿದೆ. ರಾಜ್ಯದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ಸೂಕ್ತ ಭದ್ರತೇ ಇಲ್ಲದಿರುವುದು ಭದ್ರತೆಯ ಲೋಪ ಎತ್ತಿ ಕಾಣುತ್ತಿದೆ.
ಇನ್ನು ಮುಂದೆ ರಾಜ್ಯದಲ್ಲಿ ಕಾರ್ಯನಿರ್ವಹಿಸುವ ನ್ಯಾಯಮೂರ್ತಿಗಳ ಭದ್ರತೆಗೆ ರಾಜ್ಯ ಸರ್ಕಾರವು ಸೂಕ್ತ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಲೋಕಾಯುಕ್ತ ನ್ಯಾಯಮೂರ್ತಿಗಳ ಮೇಲೆ ಹಲ್ಲೆಯಾಗಿರುವುದಕ್ಕೆ ಭದ್ರತೆಯ ಲೋಪಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ತಾಲ್ಲೂಕು ವಕೀಲರ ಸಂಘದ ಉಪಾಧ್ಯಕ್ಷ ಎಸ್‌.ಎನ್‌.ಚಂದಸ್ರಶೇಖರ್‌, ಕಾರ್ಯದರ್ಶಿ ಎಂ.ಬಿ.ಲೋಕೇಶ್‌, ಜಿ.ಎನ್‌.ನಾಗರಾಜ್‌, ವಿ.ನಾಗೇಂದ್ರಬಾಬು, ಕೆ.ಮಂಜುನಾಥ್‌, ರಾಮಕೃಷ್ಣ, ಡಿ.ಸಿ.ಮಂಜುನಾಥ್‌, ಸಿ.ಎಲ್‌.ವೆಂಕಟರೆಡ್ಡಿ, ಮೋಹನ್‌ಕುಮಾರ್‌, ಕೆಂಪೇಗೌಡ, ಶಿವಕುಮಾರ್‌, ರಾಘವೇಂದ್ರ, ವೆಂಕಟೇಶ್‌ಬಾಬು ಹಾಜರಿದ್ದರು.

error: Content is protected !!