News

ಪಡಿತರ ಚೀಟಗೆ ಇ-ಕೆವೈಸಿ ಕಡ್ಡಾಯ

Ration Card e-KYC Sidlaghatta

ಶಿಡ್ಲಘಟ್ಟ ತಾಲ್ಲೂಕಿನ ಎಲ್ಲಾ ಪಡಿತರ ಚೀಟಿ ಹೊಂದಿರುವ ಎಲ್ಲಾ ಸಾರ್ವಜನಿಕರು ತಪ್ಪದೆ ಇ-ಕೆವೈಸಿ ಮಾಡಿಸುವ ಕುರಿತು ಪ್ರಚಾರ ನಡೆಸುವ ಆಟೊಗೆ ತಾಲ್ಲೂಕು ಕಚೇರಿಯ ಬಳಿ ಚಾಲನೆ ನೀಡಿ ಶಿರಸ್ತೆದಾರ್ ಮಂಜುನಾಥ್ ಮಾತನಾಡಿದರು.

ಪಡಿತರ ಚೀಟಿಯಲ್ಲಿರುವ ಎಲ್ಲ ಸದಸ್ಯರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಇದುವರೆಗೆ ಇ-ಕೆವೈಸಿ ಮಾಡಿಸದೇ ಇರುವ ಪಡಿತರ ಚೀಟಿದಾರರು, ಕುಟುಂಬದ ಸದಸ್ಯರು ಆಗಸ್ಟ್ 1 ರಿಂದ 10ರ ವರೆಗೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳಗ್ಗೆ 7ರಿಂದ ರಾತ್ರಿ 9 ಗಂಟೆಯವರೆಗೆ ಉಚಿತವಾಗಿ ಇ-ಕೆವೈಸಿ ಮಾಡಿಸಬಹುದಾಗಿದೆ. ಇ-ಕೆವೈಸಿ ಮಾಡಿಸದೇ ಇರುವ ಪಡಿತರ ಚೀಟಿದಾರರಿಗೆ ಮುಂದಿನ ದಿನಗಳಲ್ಲಿ ಪಡಿತರ ಹಂಚಿಕೆ ಸ್ಥಗಿತಗೊಳಿಸಲಾಗುವುದು ಎಂದು ಅವರು ತಿಳಿಸಿದರು.

 ಎಲ್ಲ ನ್ಯಾಯಬೆಲೆ ಅಂಗಡಿಕಾರರು ತಮ್ಮ ನ್ಯಾಯಬೆಲೆ ಅಂಗಡಿಗಳಿಗೆ ನಿಯೋಜಿಸಿದ ಎಲ್ಲ ಪಡಿತರ ಚೀಟಿದಾರರ ಗಮನಕ್ಕೆ ಈ ವಿಷಯವನ್ನು ಕಡ್ಡಾಯವಾಗಿ ತರಬೇಕು. ತಮ್ಮ ನ್ಯಾಯಬೆಲೆ ಅಂಗಡಿಗಳ ಮುಂದೆ ಈ ವಿಚಾರವನ್ನು ಪ್ರದರ್ಶಿಸಿ ಇ-ಕೆವೈಸಿ ಕಾರ್ಯವನ್ನು ನ್ಯಾಯಬೆಲೆ ಅಂಗಡಿಯ ಲಾಗಿನ್‌ನಲ್ಲಿ ಆಗಸ್ಟ್ 10 ರೊಳಗಾಗಿ ಪೂರ್ಣಗೊಳಿಸಬೇಕು ಎಂದರು.

ಆಹಾರ ನಿರೀಕ್ಷಕಿ ವೆಂಕಟಲಕ್ಷ್ಮಮ್ಮ, ನಗರ ಪಡಿತರ ಸಂಘದ ಅಧ್ಯಕ್ಷ ಬಿ.ಕೆ.ವೇಣು ಹಾಜರಿದ್ದರು.

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Sidlaghatta Illegal Ration Rice Police Arrest

News

ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ 2500 kg Ration ಅಕ್ಕಿ ವಶ

Sidlaghatta : ಅಕ್ರಮವಾಗಿ (Illegal) ಪಡಿತರ (Ration) ಅಕ್ಕಿಯನ್ನು (Rice) ಮಿಲ್‍ವೊಂದಕ್ಕೆ ಸಾಗಾಣಿಕೆ ಮಾಡುತ್ತಿದ್ದಾಗ ಧಾಳಿ ಮಾಡಿದ ಪೊಲೀಸರು (Police) ಅಕ್ಕಿ, ಟೆಂಪೋ ಹಾಗೂ ಅಕ್ಕಿ…

Share
Ration Card E-kyc

News

ರೇಷನ್ ಪಡೆಯಲು E-KYCಯನ್ನು ತಪ್ಪದೆ ಮಾಡಿಸಬೇಕು

ಜಿಲ್ಲೆಯಲ್ಲಿ ಪಡಿತರ ಚೀಟಿದಾರರ ಇ-ಕೆವೈಸಿಯನ್ನು ತಪ್ಪದೆ ಮಾಡಿಸಬೇಕು, ಶೇ 90 ರಷ್ಟು ಗುರಿಯನ್ನು ಮುಟ್ಟುವ ಪ್ರಯತ್ನವನ್ನು ಎಲ್ಲ ಪಡಿತರ ನ್ಯಾಯ ಬೆಲೆ ಅಂಗಡಿಗಳ ಮಾಲೀಕರು ಮಾಡಲೇಬೇಕೆಂದು ಆಹಾರ ನಾಗರೀಕ…

Share
Sidlaghatta Tahsildar B S Rajiv Illegal BPL card return warning

News

ನಿಯಮಬಾಹಿರವಾಗಿ ಪಡೆದಿರುವ ಬಿಪಿಎಲ್ ಕಾರ್ಡುಗಳನ್ನು ಹಿಂದಿರುಗಿಸಿ – ತಹಶೀಲ್ದಾರ್ ಬಿ.ಎಸ್.ರಾಜೀವ್

ಸರ್ಕಾರ ನಿಗಧಿಪಡಿಸಿರುವ ಮಾನದಂಡವನ್ನು ಉಲ್ಲಂಘಿಸಿ ನಿಯಮಬಾಹಿರವಾಗಿ ಪಡೆದುಕೊಂಡಿರುವ ಬಿಪಿಎಲ್ ಹಾಗೂ ಎಎವೈ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವವರು ಜೂನ್ 30 ರೊಳಗೆ ಪಡಿತರ ಚೀಟಿತನ್ನು ಆಹಾರ…

Share

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Share
error: Content is protected !!