![28Feb24Sd2c Sankashta Chaturthi Pooja](https://www.sidlaghatta.com/wp-content/uploads/2024/02/28Feb24Sd2c.jpg)
Sidlaghatta : ಮಾಘಮಾಸದ ವಿಶೇಷ ಸಂಕಷ್ಟಹರ ಚತುರ್ಥಿಯ ಪ್ರಯುಕ್ತ ನಗರದ ಅಶೋಕ ರಸ್ತೆಯಲ್ಲಿರುವ ದ್ವಿಮುಖ ಗಣಪತಿ ದೇವಸ್ಥಾನದಲ್ಲಿ ಬುಧವಾರ ಗಣ ಹೋಮ ಮತ್ತು ಚಂಡಿಕಾ ಹೋಮವನ್ನು ಹಮ್ಮಿಕೊಳ್ಳಲಾಗಿತ್ತು. ಕನ್ಯಾ ಮುತ್ತೈದೆಯರ ಹಾಗೂ ಸುಹಾಸಿನಿಯರ ಪೂಜೆಯನ್ನು ನಡೆಸಲಾಯಿತು. ಹೆಣ್ಣುಮಕ್ಕಳಿಂದ ಹಾಗೂ ಮಹಿಳೆಯರಿಂದ ಕುಂಕುಮಾರ್ಚನೆ ನಡೆಸಲಾಯಿತು. ಮಹಾಮಂಗಳಾರತಿಯ ನಂತರ ಪ್ರಸಾದ ವಿನಿಯೋಗಿಸಲಾಯಿತು.