ನಿಧನ ವಾರ್ತೆ – ಎಚ್.ಎಸ್.ಭಾಗ್ಯಮ್ಮ

ನಿವೃತ್ತ ಶಿಕ್ಷಕಿ ಎಚ್.ಎಸ್.ಭಾಗ್ಯಮ್ಮ (84) ಅವರು ವಯೋಸಹಜ ಅನಾರೋಗ್ಯದಿಂದ ಬುಧವಾರ ಮುಂಜಾನೆ 4-30 ಗಂಟೆಗೆ ನಿಧನರಾದರು. ಮೂವರು ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ. ಹಿಂದೂ ರುದ್ರಭೂಮಿಯಲ್ಲಿ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿತು.
ಎಚ್.ಎಸ್.ಭಾಗ್ಯಮ್ಮ ಅವರು ಸುಮಾರು 36 ವರ್ಷಗಳ ಕಾಲ ಶಿಕ್ಷಕಿಯಾಗಿ ಶಿಡ್ಲಘಟ್ಟ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ, ಮುಖ್ಯಶಿಕ್ಷಕಿಯಾಗಿ ನಿವೃತ್ತರಾಗಿದ್ದರು. ಭಕ್ತರಹಳ್ಳಿಯ ಸರ್ಕಾರಿ ಶಾಲೆಯಲ್ಲಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಶಾಸಕ ಬಿ.ಎನ್.ರವಿಕುಮಾರ್, ನಗರಸಭೆ ಸದಸ್ಯೆ ಸುಗುಣ ಲಕ್ಷ್ಮೀನಾರಾಯಣ್, ಭಕ್ತರಹಳ್ಳಿಯ ಗ್ರಾಮಸ್ಥರು, ತಾಲ್ಲೂಕು ಬ್ರಾಹ್ಮಣ ಸಂಘದ ಸದಸ್ಯರು ಅಂತಿಮ ದರ್ಶನ ಪಡೆದರು.

For Daily Updates WhatsApp ‘HI’ to 7406303366
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news



