Home Chintamani ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಸಂಚಾರಕ್ಕೆ ಉಚಿತ ವಾಹನ ಸೇವೆ

ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಸಂಚಾರಕ್ಕೆ ಉಚಿತ ವಾಹನ ಸೇವೆ

0
Chintamani Sri Kshetra Dharmasthala Gramabhivruddi Sangha Free Transportation Covid Positive Patients

ಚಿಂತಾಮಣಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯು ಕೋವಿಡ್ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ಸಮಾಜ ಸೇವೆ ಕಾರ್ಯಗಳನ್ನು ಮುಂದುವರೆಸಿದ್ದು, ಚಿಂತಾಮಣಿ ತಾಲ್ಲೂಕಿನಲ್ಲಿ ಸೋಂಕು ಪೀಡಿತರ ಆಸ್ಪತ್ರೆಗೆ ತೆರಳಲು ಅಥವಾ ಆಸ್ಪತ್ರೆಯಿಂದ ಹಿಂದಿರುಗಲು ಸಂಸ್ಥೆ ಆಯೋಜಿಸಿರುವ ತುರ್ತು ವಾಹನ ಸೇವೆ ಪ್ರಾರಂಭಿಸಿದೆ.

ಕೋವಿಡ್ ಪಾಸಿಟಿವ್ ಆಗಿ ಗುರುತಿಸಿಕೊಂಡವರು ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ಸಂಚರಿಸಲು ಈ ಉಚಿತ ವಾಹನ ಸಂಚಾರ ಸೇವೆಯು ಉಪಯೋಗಕರವಾಗಿದ್ದು ಕೇವಲ 2 ದಿನಗಳಲ್ಲಿ 16 ಜನ ಕೋವಿಡ್ ಪಾಸಿಟಿವ್ ವ್ಯಕ್ತಿಗಳು ಸೇವೆಯನ್ನು ಪಡೆದುಕೊಂಡಿದ್ದಾರೆ ಎಂದು ಚಿಂತಾಮಣಿ ತಾಲ್ಲೂಕು ಯೋಜನಾಧಿಕಾರಿ ಶಾರಿಕ ತಿಳಿಸಿದ್ದಾರೆ.

ಸೇವೆಯನ್ನು ಪಡೆಯಲು ಮೊಬೈಲ್‌ 9880048077 ಮತ್ತು 8762534120 ಸಂಪರ್ಕಿಸಲು ಕೋರಲಾಗಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version