Home Covid-19 ಶಿಡ್ಲಘಟ್ಟ ತಾಲ್ಲೂಕಿನಲ್ಲಿ 9 ಕೊರೊನಾ ಪಾಸಿಟೀವ್ ಪ್ರಕರಣಗಳು ದಾಖಲು

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 9 ಕೊರೊನಾ ಪಾಸಿಟೀವ್ ಪ್ರಕರಣಗಳು ದಾಖಲು

0

ನಗರ ಮತ್ತು ತಾಲ್ಲೂಕಿನಲ್ಲಿ ಗುರುವಾರ 9 ಮಂದಿಗೆ ಕೊರೊನಾ ಸೋಂಕು ತಗುಲಿದೆ. ನಗರದ ಫಿಲೇಚರ್ ಕ್ವಾಟರ್ಸ್ ನ 50 ವರ್ಷದ ಮಹಿಳೆ, ಶೆಟ್ಟಿಹಳ್ಳಿಯ 57 ವರ್ಷದ ವ್ಯಕ್ತಿ, ಮೇಲೂರಿನ ಏಳು ಮಂದಿಗೆ ಕೊರೊನಾ ಸೋಂಕು ತಗುಲಿದೆ.
ತಾಲ್ಲೂಕಿನ ಮೇಲೂರಿನ 43 ವರ್ಷದ ಗಂಡಸು, 70 ವರ್ಷದ ವೃದ್ಧ, 54 ವರ್ಷದ ಗಂಡಸು, 40 ವರ್ಷದ ಮಹಿಳೆ, 46 ವರ್ಷದ ಗಂಡಸು, 48 ವರ್ಷದ ಗಂಡಸು, 55 ವರ್ಷದ ಗಂಡಸಿಗೆ ಸೋಂಕು ತಗುಲಿದೆ.
ರ್ಯಾಪಿಡ್ ಆಂಟಿಜನ್ ಕಿಟ್‌ನ ಮೂಲಕ ಮೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಸಿದ ಪರೀಕ್ಷೆಯಿಂದಾಗಿ ಮೇಲೂರಿನ 45 ವರ್ಷದ ವ್ಯಕ್ತಿಯೊಬ್ಬರಿಗೆ ಪಾಸಿಟಿವ್ ಎಂಬುದು ತಿಳಿದು ಬಂದಿದೆ. ಆರೋಗ್ಯ ಸಿಬ್ಬಂದಿ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕಳುಹಿಸಿದ್ದಾರೆ. ಸೋಂಕಿತರು ವಾಸಿಸುತ್ತಿದ್ದ ಪ್ರದೇಶವನ್ನು ಸೀಲ್ ಡೌನ್ ಮಾಡಿ, ಸೂಕ್ಷ್ಮಾಣು ನಾಶಕವನ್ನು ಸಿಂಪಡಣೆ ಮಾಡಿಸಿದ್ದಾರೆ.

error: Content is protected !!