Home Covid-19 ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬುಧವಾರ 14 ಕೊರೊನ ಪಾಸಿಟಿವ್ ಪ್ರಕರಣ ದಾಖಲು

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬುಧವಾರ 14 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ತಾಲ್ಲೂಕಿನಲ್ಲಿ ಬುಧವಾರ 14 ಮಂದಿಗೆ ಕೊರೊನಾ ಸೋಂಕು ತಗುಲಿದೆ. ತಾಲ್ಲೂಕಿನ ಮೇಲೂರಿನ 11 ಮಂದಿ, ನಾಗಮಂಗಲ, ಭಕ್ತರಹಳ್ಳಿ ಮತ್ತು ವರದನಾಯಕನಹಳ್ಳಿ ಗೇಟ್ ನಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.
ಮೇಲೂರಿನ 85 ವರ್ಷದ ವೃದ್ಧ, 19 ವರ್ಷದ ಯುವತಿ, 17 ವರ್ಷದ ಯುವಕ, 33 ವರ್ಷದ ಮಹಿಳೆ, 11 ತಿಂಗಳ ಹೆಣ್ಣುಮಗು, 34 ವರ್ಷದ ಗಂಡಸು, 6 ವರ್ಷದ ಹೆಣ್ಣುಮಗು, 4 ವರ್ಷದ ಹೆಣ್ಣುಮಗು, 50 ವರ್ಷದ ಮಹಿಳೆ, 56 ವರ್ಷದ ಮಹಿಳೆ, 68 ವರ್ಷದ ಗಂಡಸು, ಭಕ್ತರಹಳ್ಳಿಯ 61 ವರ್ಷದ ಗಂಡಸು, ನಾಗಮಂಗಲದ 35 ವರ್ಷದ ಗಂಡಸು, ವರದನಾಯಕನಹಳ್ಳಿ ಗೇಟ್ ನ 32 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

error: Content is protected !!