Home News ಅಕ್ಷರ ದಾಸೋಹ ನೌಕರರಿಂದ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿ ಧಹಿಸಿ ಪ್ರತಿಭಟನೆ

ಅಕ್ಷರ ದಾಸೋಹ ನೌಕರರಿಂದ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿ ಧಹಿಸಿ ಪ್ರತಿಭಟನೆ

0

ಅಕ್ಷರ ದಾಸೋಹ ನೌಕರರ ಸಂಘದ ಸದಸ್ಯರು ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಯನ್ನು ಧಹಿಸುವ ಮೂಲಕ ನಗರದಲ್ಲಿ ಶನಿವಾರ ಪ್ರತಿಭಟನೆಯನ್ನು ನಡೆಸಿದರು.
ಅಕ್ಷರ ದಾಸೋಹ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಮುನಿಲಕ್ಷ್ಮಮ್ಮ ಮಾತನಾಡಿ, ಬಿಸಿಯೂಟ ಪ್ರಾರಂಭವಾಗಿ ೧೫ ವರ್ಷಗಳಾಗಿವೆ. ಕೇಂದ್ರ ಸರ್ಕಾರ ನಮಗೆ ಯಾವುದೇ ಸೌಲಭ್ಯ, ಆರ್ಥಿಕ ಭದ್ರತೆ ನೀಡದೆ ಕಡೆಗಣಿಸಿದೆ. ಅಂಗನವಾಡಿ ನೌಕರರಿಗೆ, ಆಶಾಕಾರ್ಯಕರ್ತೆಯರಿಗೆ ಮತ್ತು ಗ್ರಾಮ ಪಂಚಾಯಿತಿ ನೌಕರರಿಗೆ ಸರ್ಕಾರ ಅನುದಾನ, ಕನಿಷ್ಠ ವೇತನ ನೀಡಿದೆ. ಆದರೆ ಪ್ರತಿದಿನ ಮಕ್ಕಳಿಗೆ ರುಚಿಕಟ್ಟಾಗಿ ಅಡುಗೆ ಮಾಡಿ ಬಡಿಸುವ ಬಿಸಿಯೂಟ ನೌಕರರ ಬಗ್ಗೆ ಕಾಳಜಿ ವಹಿಸಿಲ್ಲ. ವೇತನ ಬಿಡುಗಡೆಗೆ ನಾವು ನಿರಂತರವಾಗಿ ಹೋರಾಡುತ್ತಲೇ ಬಂದಿದ್ದೇವೆ.
ಒಂದು ಲಕ್ಷ ೨೦ ಸಾವಿರ ಮಂದಿ ನಾವು ಬಿಸಿಯೂಟ ನೌಕರರಿದ್ದೇವೆ. ಕೂಡಲೇ ಸರ್ಕಾರ ಎಚ್ಚೆತ್ತು ಬಿಸಿಯೋಟ ನೌಕರರ ವೇತನ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.
ಪ್ರಧಾನಿ ನರೇಂದ್ರಮೋದಿ ಅವರು ಬಿಡುಗಡೆ ಮಾಡಿರುವ ಬಜೆಟ್‌ನಲ್ಲಿ ಅಸಂಘಟಿತ ಕಾರ್ಮಿಕರಿಗೂ ಸಹ ಯೋಜನೆ ರೂಪಿಸಿದ್ದು, ಬಿಸಿಯೂಟ ನೌಕರರನ್ನು ಕಡೆಗಣಿಸಲಾಗಿದೆ. ಕನಿಷ್ಟ ವೇತನ, ಭದ್ರತೆ ಒದಗಿಸಬೇಕೆಂದು ಬಿಸಿಯೋಟ ನೌಕರರು ಹಲವಾರು ವರ್ಷಗಳಿಂದ ಬೇಡಿಕೆ ಇಟ್ಟಿದ್ದರೂ ಫಲಪ್ರದವಾಗಿಲ್ಲ. ಮುಂದಿನ ದಿನಗಳಲ್ಲಿ ಕನಿಷ್ಟ ವೇತನ ನೀಡದಿದಲ್ಲಿ ದೆಹಲಿ ಚಲೋ ಆಂದೋಲನ ಹಮ್ಮಿಕೊಳ್ಳಲಾಗುವುದೆಂದು ಹೇಳಿದರು.
ನಗರದ ಪ್ರವಾಸಿ ಮಂದಿರದಿಂದ ಕೋಟೆ ವೃತ್ತದವರೆಗೂ ಹಾಗೂ ಕೋಟೆ ವೃತ್ತದಿಂದ ರೈಲ್ವೆ ನಿಲ್ದಾಣದವರೆಗೂ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು. ರೈಲ್ವೆ ನಿಲ್ದಾಣದ ಬಳಿ ರಸ್ತೆಯಲ್ಲಿ ಪ್ರಧಾನಿ ಮೋದಿ ಅವರ ಪ್ರತಿಕೃತಿಯನ್ನು ದಹನ ಮಾಡಿದರು.
ಮಂಜುಳಮ್ಮ, ನಾಗರತ್ನ, ಮೀನಾಕ್ಷಮ್ಮ, ಶೋಭಾ, ಗಾಯಿತ್ರಿ, ಚಂದ್ರಕಲಾ, ಸೌಭಾಗ್ಯ ಹಾಜರಿದ್ದರು.

error: Content is protected !!