ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ನಗರದ ಅಭಿವೃದ್ದಿಗಾಗಿ ಶ್ರಮಿಸಬೇಕಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
2012-13 ನೇ ಸಾಲಿನ ಎಸ್‍ಎಫ್‍ಸಿ ಯೋಜನೆಯಡಿ ಸುಮಾರು 5 ಲಕ್ಷ 25 ಸಾವಿರ ರೂ ವೆಚ್ಚದಲ್ಲಿ ನಗರದ 2 ಮತ್ತು 3 ನೇ ವಾರ್ಡಿಗೆ ಸೇರುವ ಡಿಸಿಸಿ ಬ್ಯಾಂಕ್ ರಸ್ತೆಯ ಡಾಂಬರೀಕರಣ ಹಾಗು ಪೈಪ್‍ಲೈನ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಇದೀಗ ನಗರದ ಡಿಸಿಸಿ ಬ್ಯಾಂಕ್ ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಡಾಂಬರೀಕರಣ ಹಾಗು ಪೈಪ್‍ಲೈನ್ ಕಾಮಗಾರಿಯ ಗುಣಮಟ್ಟ ಕಾಪಾಡಿಕೊಳ್ಳಲು ಎಚ್ಚರಿಕೆವಹಿಸಿ ಕಾಲ ಕಾಲಕ್ಕೆ ಕಾಮಗಾರಿಯ ಮೇಲೆ ನಿಗಾವಹಿಸುವಂತೆ ನಾಗರೀಕರಲ್ಲಿ ಮನವಿ ಮಾಡಿದರು.
ನಗರಸಭೆ ಆಯುಕ್ತ ಹೆಚ್.ಎ.ಹರೀಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಿಶನ್ (ನಂದು), ನಗರಸಭೆ ಸದಸ್ಯರಾದ ಜಭೀವುಲ್ಲಾ, ಎಸ್.ರಾಘವೇಂದ್ರ, ವೆಂಕಟಸ್ವಾಮಿ, ಮುಖಂಡರಾದ ಎಸ್.ಎಂ.ರಮೇಶ್, ಜೆಇ ಪ್ರಸಾದ್, ಗುತ್ತಿಗೆದಾರ ಕೆ.ಬಿ.ಮಂಜುನಾಥ, ಪ್ರಭಾಕರ ಮತ್ತಿತರರು ಹಾಜರಿದ್ದರು.