Home News ಅಭಿವೃದ್ಧಿ ಹಾಗೂ ಮೂಲಭೂತ ಸಮಸ್ಯೆಗಳನ್ನು ನಿವಾರಿಸುವುದು ನಮ್ಮ ಗುರಿ – ಆಂಜಿನಪ್ಪ(ಪುಟ್ಟು)

ಅಭಿವೃದ್ಧಿ ಹಾಗೂ ಮೂಲಭೂತ ಸಮಸ್ಯೆಗಳನ್ನು ನಿವಾರಿಸುವುದು ನಮ್ಮ ಗುರಿ – ಆಂಜಿನಪ್ಪ(ಪುಟ್ಟು)

0

ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ. ಸ್ಥಳೀಯನಾಗಿ ಕ್ಷೇತ್ರದಲ್ಲಿ ಹಲವಾರು ಸೇವಾ ಕಾರ್ಯಗಳನ್ನು ನಡೆಸುವ ಮೂಲಕ ಹಳ್ಳಿ ಹಳ್ಳಿಯನ್ನೂ ಸುತ್ತಿದ್ದೇನೆ. ಜನರ ಕಷ್ಟಕ್ಕೆ ಸ್ಪಂದಿಸಿದ್ದೇನೆ. ಕ್ಷೇತ್ರದಲ್ಲಿ ಕುಡಿಯುವ ನೀರು, ಉತ್ತಮ ರಸ್ತೆ, ಆರೋಗ್ಯ, ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಯೋಜನೆಗಳನ್ನು ರೂಪಿಸುವ ಉದ್ದೇಶವಿದೆ ಪಕ್ಷೇತರ ಅಭ್ಯರ್ಥಿ ಆಂಜಿನಪ್ಪ(ಪುಟ್ಟು) ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ನಡಿಪಿನಾಯಕನಹಳ್ಳಿ, ತೊಟ್ಟಲಿಗಾನಹಳ್ಳಿ, ಮಳಮಾಚನಹಳ್ಳಿ, ಯಣ್ಣಂಗೂರು, ನಾಗಮಂಗಲ ಗ್ರಾಮಗಳಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಕೈಗೊಂಡಿದ್ದ ಅವರು ಮಾತನಾಡಿದರು.
ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯದ ಜನಪ್ರತಿನಿಧಿಗಳಿಗೆ ಪುನಃ ಮಾನ್ಯತೆ ನೀಡಬೇಡಿ. ಹೊಸಬರಿಗೆ ಆದ್ಯತೆ ನೀಡಿ. ಅಭಿವೃದ್ಧಿ ಹಾಗೂ ಮೂಲಭೂತ ಸಮಸ್ಯೆಗಳನ್ನು ನಿವಾರಿಸುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ಸುಮಾರು 20ಕ್ಕೂ ಅದಿಕ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡಿದ್ದು, ಶಿಬಿರಗಳಲ್ಲಿ ಶಸ್ತ್ರಚಿಕಿತ್ಸೆ ಬೇಕಾಗಿರುವ ರೋಗಿಗಳಿಗೆ ಹೊಸಕೋಟೆಯ ಎಂವಿಜೆ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿದ್ದೇವೆ. ಬಡ ಕುಟುಂಬಳಿಗೆ ಜೀವನಾಧಾರ ಕಲ್ಪಿಸುವ ನಿಟ್ಟಿನಲ್ಲಿ ಉಚಿತ ಹೊಲಿಗೆ ಯಂತ್ರಗಳ ವಿತರಣೆ ಕೂಡ ಮಾಡಿದ್ದು, ಅಭಿವೃದ್ಧಿಯತ್ತ ಸಾಗಲು ಮತದಾನ ಮಾಡಿ. ಯಾರೋ ಗೆದ್ದು ಮಂತ್ರಿಯಾದರೆ ಕ್ಷೇತ್ರಕ್ಕೇನೂ ಬರದು, ಮೂಲಭೂತ ಸೌಕರ್ಯ ನಿರ್ಮಾಣವಾಗದು. ಕೇವಲ ಅವರ ಸಂಪತ್ತು ಬೆಳೆಯುತ್ತದೆ ಅಷ್ಟೆ.
ನನಗೆ ಚುನಾವಣಾ ಆಯೋಗ 9ನೇ ಕ್ರಮ ಸಂಖ್ಯೆಯಲ್ಲಿ ಟ್ರಾಕ್ಟರ್‌ನಲ್ಲಿ ಉಳುವ ರೈತನ ಚಿಹ್ನೆ ನೀಡಿದ್ದು, ಮತದಾನ ಮಾಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು,
ಈ ಸಂದರ್ಭದಲ್ಲಿ ಚಿಕ್ಕಣ್ಣ, ಅಶ್ವತ್ಥನಾರಾಯಣರೆಡ್ಡಿ, ಅಫ್ಸರ್ ಪಾಷ, ನವೀನ್ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

error: Content is protected !!