Home News ಆಸಿಫಾಳ ಅತ್ಯಾಚಾರ, ಕೊಲೆ ಆರೋಪಿಗಳ ಶಿಕ್ಷೆಗೆ ಒತ್ತಾಯಿಸಿ ಪಂಜಿನ, ಮೇಣದ ಬತ್ತಿಯ ಮೆರವಣಿಗೆ

ಆಸಿಫಾಳ ಅತ್ಯಾಚಾರ, ಕೊಲೆ ಆರೋಪಿಗಳ ಶಿಕ್ಷೆಗೆ ಒತ್ತಾಯಿಸಿ ಪಂಜಿನ, ಮೇಣದ ಬತ್ತಿಯ ಮೆರವಣಿಗೆ

0

‘ಜಸ್ಟಿಸ್ ಫಾರ್ ಆಸೀಫಾ’, ‘ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆ ವಿಧಿಸಿ’ ಎಂಬ ಭಿತ್ತಿಚಿತ್ರಗಳೊಂದಿಗೆ, ಕಥುವಾದ 8 ವರ್ಷದ ಬಾಲಕಿ ಆಸಿಫಾಳನ್ನು ನಿರಂತರ ಅತ್ಯಾಚಾರಗೈದು ಕೊಲೆ ಮಾಡಿರುವುದನ್ನು ಖಂಡಿಸಿ, ನಗರದಲ್ಲಿ ವಿವಿಧ ಸಂಘಟನೆಗಳು ಪಂಜಿನ, ಮೇಣದ ಬತ್ತಿಯ ಹಾಗೂ ಮೊಬೈಲ್‌ ಟಾರ್ಚ್‌ನ ಬೆಳಕಿನೊಂದಿಗೆ ಪ್ರತಿಭಟನೆ ನಡೆಸಿದರು.
ಕೊಹಿನೂರ್‌ ಟಿಪ್ಪು ತಾಲಿಮ್‌ ಮೈನಾರಿಟಿ ವೆಲ್‌ಫೇರ್‌ ಟ್ರಸ್ಟ್‌, ಯೂನಿಟಿ ಸಿಲ್‌ಸಿಲಾ ಫೌಂಡೇಷನ್‌, ವಿ ಕೇರ್‌ ಫೌಂಡೇಷನ್‌, ಸಲಿತ ಸಂಘರ್ಷ ಸೇನೆ, ಜಾಮಿಯಾ ಮತ್ತು ಮದೀನಾ ಮಸೀದಿ ಕಮಿಟಿ ಸದಸ್ಯರು ಮುಂತಾದ ಸಂಘಟನೆಗಳ ಸದಸ್ಯರು ಮೆರವಣಿಯಲ್ಲಿ ಪಾಲ್ಗೊಂಡರು.
ನಗರದ ಅಮೀರ್‌ಬಾಬಾ ದರ್ಗಾದಿಂದ ಮೆರವಣಿಗೆಯನ್ನು ಪ್ರಾರಂಭಿಸಿ, ಕೋಟೆ ವೃತ್ತದವರೆಗೂ ತೆರಳಿ ನಂತರ ತಾಲ್ಲೂಕು ಕಚೇರಿಗೆ ವಾಪಸಾಗಿ ಮನವಿಯನ್ನು ಸಲ್ಲಿಸಿದರು.

error: Content is protected !!