Home News ಒಕ್ಕಲಿಗರ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ

ಒಕ್ಕಲಿಗರ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ

0

ಒಕ್ಕಲಿಗರ ಯುವಸೇನೆ ಸಂಘದ ಧ್ಯೇಯೋದ್ಧೇಶಗಳನ್ನು ಈಡೇರಿಸುವ ಸಲುವಾಗಿ ತಾಲ್ಲೂಕಿನಾದ್ಯಂತ ಇರುವ ಗ್ರಾಮ ಪಂಚಾಯಿತ ವ್ಯಾಪ್ತಿಯಲ್ಲಿ ಒಕ್ಕಲಿಗರ ಯುವಸೇನೆ ಸಂಘ ಸಮಿತಿಗಳನ್ನು ರಚಿಸಲಾಗುತ್ತಿದೆ ಎಂದು ತಾಲ್ಲೂಕು ಒಕ್ಕಲಿಗರ ಯುವಸೇನೆ ಸಂಘದ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ ತಿಳಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಕ್ಕಲಿಗರ ಯುವಸೇನೆ ಸಂಘದ ಸಮಿತಿ ರಚಿಸಿ ಅವರು ಮಾತನಾಡಿದರು.
ಗ್ರಾಮೀಣ ಅಭಿವೃದ್ಧಿ, ಶಿಕ್ಷಣ, ನೈರ್ಮಲ್ಯ, ಸಾಂಸ್ಕೃತಿಕ ಪರಂಪರೆ ಉಳಿಸುವಿಕೆ, ಜಾನಪದ ರಕ್ಷಣೆ, ಆರೋಗ್ಯ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಒಕ್ಕಲಿಗರ ಯುವಸೇನೆ ಸಂಘ ಸದಾ ಚಟುವಟಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಕ್ಕಲಿಗರ ಯುವಸೇನೆ ಸಂಘದ ಕಾರ್ಯಕಾರಿ ಸಮಿತಿ:
ಗೌರವಾಧ್ಯಕ್ಷ ಶಿವರಾಮರೆಡ್ಡಿ, ಅಧ್ಯಕ್ಷ ಬಿ.ಎಸ್.ವೆಂಕಟರೆಡ್ಡಿ, ಉಪಾಧ್ಯಕ್ಷ ರಾಘವೇಂದ್ರ.ಕೆ.ಆರ್. ಕಾರ್ಯಾಧ್ಯಕ್ಷ ಶ್ರೀನಿವಾಸಮೂರ್ತಿ, ಪ್ರಧಾನ ಕಾರ್ಯದರ್ಶಿ ಮುನಿರಾಜು.ಡಿ.ಬಿ. ಖಜಾಂಚಿ ದೇವರಾಜ್.ಎ.ಎನ್. ಸಂಘಟನಾ ಕಾರ್ಯದರ್ಶಿ ನಾರಾಯಣರೆಡ್ಡಿ, ಕಾರ್ಯದರ್ಶಿ ಆವಲರೆಡ್ಡಿ, ಸಹಕಾರ್ಯದರ್ಶಿ ದೇವರಾಜ.ಬಿ, ಸಹ ಸಂಘಟನಾ ಕಾರ್ಯದರ್ಶಿ ಎಸ್.ವೆಂಕಟೇಶ್, ಸದಸ್ಯರಾಗಿ ಜಯರಾಂ.ಬಿ.ಎ, ಮುದ್ದುಕೃಷ್ಣ, ದ್ಯಾವಪ್ಪ.ಬಿ.ಸಿ, ಗಣೇಶ್, ಕೆ.ಗಂಗರೆಡ್ಡಿ, ಮಧುಸೂದನ್.ಡಿ. ಅನಿಲ್‍ಕುಮಾರ್, ಶಶಿಕುಮಾರ್,ಎಂ.ಬಿ, ರಮೇಶ್.ವಿ.ಪಿ. ರವಿಕುಮಾರ್.ಎ.ಜಿ. ಮಂಜುನಾಥ.ಎ.ಜೆ. ಬೈರೆಡ್ಡಿ.ಕೆ.ಎಸ್. ಮಂಜುನಾಥ.ಕೆ. ಶಿವಪ್ಪ, ರವಿಕುಮಾರ್.ಜಿ.ಎನ್. ದೇವೇಂದ್ರ.ಡಿ.ಆರ್, ಡಿ.ಬಿ.ಕೃಷ್ಣಪ್ಪ, ಆಂಜಿನಪ್ಪ ಆಯ್ಕೆಯಾಗಿದ್ದಾರೆ.

error: Content is protected !!