Home News ಕನ್ನಡಿಗರ ಸಾರಥ್ಯದ ಕರವೇ ನಗರ ಮತ್ತು ತಾಲ್ಲೂಕು ಘಟಕಗಳ ಪದಾಧಿಕಾರಿಗಳ ಆಯ್ಕೆ

ಕನ್ನಡಿಗರ ಸಾರಥ್ಯದ ಕರವೇ ನಗರ ಮತ್ತು ತಾಲ್ಲೂಕು ಘಟಕಗಳ ಪದಾಧಿಕಾರಿಗಳ ಆಯ್ಕೆ

0

ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡಿಗರ ಸಾರಥ್ಯದ ಕರ್ನಾಟಕ ರಕ್ಷಣಾ ವೇದಿಕೆಯ ನಗರ ಮತ್ತು ತಾಲ್ಲೂಕು ಘಟಕಗಳ ಪದಾಧಿಕಾರಿಗಳ ಆಯ್ಕೆಯನ್ನು ಶುಕ್ರವಾರ ನಡೆಸಲಾಯಿತು.
ತಾಲ್ಲೂಕು ಅಧ್ಯಕ್ಷರಾಗಿ ಹರೀಶ್‌, ಉಪಾಧ್ಯಕ್ಷ ರಮೇಶ್‌, ನಗರ ಘಟಕದ ಅಧ್ಯಕ್ಷರಾಗಿ ಮನೋಹರ್‌, ಉಪಾಧ್ಯಕ್ಷರಾಗಿ ರತ್ನಯ್ಯ, ಪುಟ್ಟಣ್ಣ, ಗೌರವಾಧ್ಯಕ್ಷರಾಗಿ ಕೇಶವಮೂರ್ತಿ, ಕಸಬಾ ಹೋಬಳಿ ಅಧ್ಯಕ್ಷರಾಗಿ ನಾರಾಯಣಪ್ಪ, ಜಂಗಮಕೋಟೆ ಹೋಬಳಿ ಅಧ್ಯಕ್ಷರಾಗಿ ಸಂತೋಷ್‌ ಆಯ್ಕೆಯಾದರು.
ರಾಜ್ಯಾಧ್ಯಕ್ಷ ಅಗಲಗುರ್ಕಿ ಛಲಪತಿ, ರಾಜ್ಯ ಗೌರವಾಧ್ಯಕ್ಷ ಚಂದ್ರಶೇಖರ್‌, ಬೆಂಗಳೂರು ನಗರಾಧ್ಯಕ್ಷ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮರನಾಥ್‌ವರ್ಮ, ಜಿಲ್ಲಾಧ್ಯಕ್ಷ ಎನ್‌.ಅಂಬರೀಶ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರ್‌ ಹಾಜರಿದ್ದರು.

error: Content is protected !!