Home News ಕನ್ನಡ ಸಾಹಿತ್ಯ ಸಮ್ಮೇಳನ ಮೆರವಣಿಗೆಯಲ್ಲಿ ಪ್ರತಿಭಟನೆ

ಕನ್ನಡ ಸಾಹಿತ್ಯ ಸಮ್ಮೇಳನ ಮೆರವಣಿಗೆಯಲ್ಲಿ ಪ್ರತಿಭಟನೆ

0

‘ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ತಾಲ್ಲೂಕು ಕಸಾಪ ಅಧ್ಯಕ್ಷ ಮಂಜುನಾಥ್‌ಗೆ ಧಿಕ್ಕಾರ’ ಎಂದು ಕಪ್ಪು ಬಾವುಟವನ್ನು ಹಿಡಿದು ಘೋಷಣೆಯ ಫಲಕದೊಂದಿಗೆ ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ಈಧರೆ ಪ್ರಕಾಶ್‌ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಪ್ರತಿಭಟಿಸಿದರು. ‘ನನ್ನ ಪ್ರತಿಭಟನೆ ಕಸಾಪ ವಿರುದ್ಧ ಅಲ್ಲ, ಸ್ವಜನ ಪಕ್ಷಪಾತಿ, ಸರ್ವಾಧಿಕಾರಿ ಧೋರಣೆಯ ದಲಿತ ವಿರೋಧಿ ಅಧ್ಯಕ್ಷ ಮಂಜುನಾಥ್‌ ವಿರುದ್ಧವಾಗಿದೆ. ಸಾಮಾಜಿಕ ನ್ಯಾಯವಿರೋಧಿ ತಾಲ್ಲೂಕು ಕಸಾಪ ಅಧ್ಯಕ್ಷರಿಗೆ ಧಿಕ್ಕಾರ’ ಎಂದು ಘೋಷಣೆ ಕೂಗಿದರು. ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ನವೀನ್‌ ಸ್ಥಳಕ್ಕೆ ಆಗಮಿಸಿ ಈಧರೆ ಪ್ರಕಾಶ್‌ ಅವರನ್ನು ಠಾಣೆಗೆ ಕರೆದೊಯ್ದರು.
‘ನಾನು ತಾಲ್ಲೂಕು ಕಸಾಪ ಕಾರ್ಯದರ್ಶಿಯಾಗಿದ್ದರೂ ಕಸಾಪ ಚಟುವಟಿಕೆಗಳಿಂದ ನನ್ನನ್ನು ಉದ್ದೇಶಪೂರ್ವಕವಾಗಿ ದೂರವಿಟ್ಟಿದ್ದಾರೆ. ಸಭೆಯನ್ನು ಕರೆದು ನಿರ್ಣಯ ಮಾಡದೇ ಕಸಾಪ ನಡಾವಳಿಗಳಿಗೆ ತಿಲಾಂಜಿಯಿಟ್ಟಿದ್ದಾರೆ. ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡು ಸ್ವಜನಪಕ್ಷಪಾತದಿಂದ ಸಮ್ಮೇಳನವನ್ನು ನಡೆಸಿದ್ದಾರೆ’ ಎಂದು ಈಧರೆ ಪ್ರಕಾಶ್‌ ಆರೋಪಿಸಿದರು.

error: Content is protected !!