Home News ಕಾಗೆಗಳಿಂದ ಆಕ್ರಮಣಕ್ಕೊಳಗಾದ ಕೋಗಿಲೆಯ ರಕ್ಷಣೆ

ಕಾಗೆಗಳಿಂದ ಆಕ್ರಮಣಕ್ಕೊಳಗಾದ ಕೋಗಿಲೆಯ ರಕ್ಷಣೆ

0

ತಾಲ್ಲೂಕಿನ ತಾದೂರು ಗ್ರಾಮದಲ್ಲಿ ಕಾಗೆಗಳಿಂದ ಆಕ್ರಮಣಕ್ಕೊಳಗಾದ ಹೆಣ್ಣು ಕೋಗಿಲೆ ಹಕ್ಕಿಯನ್ನು ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್‌ ರಕ್ಷಿಸಿದ್ದಾರೆ.
ವಸಂತದ ಗಾಯನಕ್ಕೆ ಹೆಸರಾದ ಕೋಗಿಲೆಯು ಸಾಮಾನ್ಯವಾಗಿ ಕಾಗೆಯ ಗೂಡಲ್ಲಿ ಮೊಟ್ಟೆ ಇಡುತ್ತದೆ. ಅದು ಬೆಳೆದಂತೆ ತನ್ನ ಕಂಠದಿಂದ ಹಾಡಲು ಶುರು ಮಾಡಿದಾಗ ಅದರ ನಿಜ ಸ್ವರೂಪ ಕಾಗೆಗೆ ತಿಳಿದು ಅದನ್ನು ತನ್ನ ಗೂಡಿನಿಂದ ಹೊರ ತಳ್ಳುತ್ತದೆ. ಹೀಗಾಗಿ ಕಾಗೆಗಳು ಕೋಗಿಲೆಯನ್ನು ದ್ವೇಷಿಸುತ್ತವೆ.
ಒಬ್ಬಂಟಿ ಸಿಕ್ಕ ಕೋಗಿಲೆಯನ್ನು ಕಾಗೆಗಳು ಆಕ್ರಮಣ ಮಾಡಿದ್ದು ಕಂಡು ಬಿಡಿಸಿದ ಮಂಜುನಾಥ್‌ ಅವರು ಅದಕ್ಕೆ ನೀರು ಕುಡಿಸಿ ಆರೈಕೆ ಮಾಡಿ ನಂತರ ಅದು ಗೆಲುವಾದದ್ದನ್ನು ಕಂಡು ಸುರಕ್ಷಿತ ಪ್ರದೇಶದಲ್ಲಿ ಬಿಟ್ಟಿದ್ದಾರೆ.

error: Content is protected !!