Home News "ಕಾರ್ಗಿಲ್ ವಿಜಯ್’ ದಿವಸದ ಅಂಗವಾಗಿ ಚಿತ್ರಕಲಾ ಹಾಗೂ ಚರ್ಚಾ ಸ್ಪರ್ಧೆ

"ಕಾರ್ಗಿಲ್ ವಿಜಯ್’ ದಿವಸದ ಅಂಗವಾಗಿ ಚಿತ್ರಕಲಾ ಹಾಗೂ ಚರ್ಚಾ ಸ್ಪರ್ಧೆ

0

ತಾಲ್ಲೂಕಿನ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್‌ನ ಸುಂಡ್ರಳ್ಳಿ ಕ್ಯಾಂಪ್ ಬಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ “ಕಾರ್ಗಿಲ್ ವಿಜಯ್” ದಿವಸದ ಅಂಗವಾಗಿ ಮಕ್ಕಳಿಗಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ರಿಜನಲ್ ಮ್ಯಾನೇಜರ್ ಕಿಶೋರ್ ಕುಮಾರ್ ಮಾತನಾಡಿದರು.
ಗ್ರಾಮೀಣ ಪ್ರದೇಶದಿಂದ ಬಂದವರೂ ಸಹ ಉತ್ತಮ ಗುರಿಯೊಂದಿದ್ದರೆ, ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂಬುದಕ್ಕೆ ದೇಶದಲ್ಲಿ ಸಾವಿರಾರು ಉದಾಹರಣೆಗಳು ಕಂಡು ಬರುತ್ತಿದೆ. ಗ್ರಾಮೀಣ ಹಾಗೂ ಪಟ್ಟಣವೆಂಬ ಭೇದ ಭಾವ ಸಾಧಕರಿಗೆ ಅನ್ವಯಿಸುವುದಿಲ್ಲವೆಂದು ಅವರು ತಿಳಿಸಿದರು.
ಐ.ಟಿ.ಪಿ.ಬಿ ಕಮ್ಯಾಂಡೆಂಟ್ ಸೆಂದಿಲ್ ಕುಮಾರ್ ಮಾತನಾಡಿ, ನಮ್ಮ ದೇಶಕ್ಕಾಗಿ ಪ್ರಾಣ ತೆತ್ತ ಸೈನಿಕರನ್ನು ಜನತೆ ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ಪಾಕಿಸ್ತಾನದ ವಿರುದ್ದ ಕಾರ್ಗಿಲ್ ಯುದ್ದದಲ್ಲಿ ಭಾರತ ವಿಜಯ ಸಾಧಿಸುವುದರ ಹಿಂದೆ ನೂರಾರು ಜನ ಸೈನಿಕರ ಬಲಿದಾನವಾಗಿರುವುದನ್ನೂ ಸಹ ಮರೆಯಬಾರದೆಂದು. ಸೇನೆಯಲ್ಲಿ ಸೇರಿ ದೇಶಕ್ಕಾಗಿ ಸೇವೆ ಸಲ್ಲಿಸುವುದು ಹೆತ್ತ ತಾಯಿಗೆ ಸೇವೆ ಸಲ್ಲಿಸಿದಷ್ಟೇ ಸಮಾನವಾದದ್ದು. ಆದ್ದರಿಂದ ಮಕ್ಕಳು ದೇಶ ಸೇವೆಗಾಗಿ ಸೈನ್ಯ ಸೇರುವ ಮೂಲಕ ದೇಶ ಸೇವೆ ಸಲ್ಲಿಸಲು ಒಂದು ದಾರಿಯಾಗುತ್ತದೆ ಎಂದು ಹೇಳಿದರು.
ವಿಜಯಪುರ ಟೌನ್ ಎಸ್.ಬಿ.ಐ ಬ್ಯಾಂಕ್‌ನ ವ್ಯವಸ್ಥಾಪಕಿ ಅನಿ ಪ್ರಮೋದ್, ಐ.ಟಿ.ಪಿ.ಬಿ ಯ ಚೀಫ್ ಮೆಡಿಕಲ್ ಆಫೀಸರ್ ಡಾ.ಸಿ.ರಾಜ್‌ಕುಮಾರ್, ಅಸಿಸ್ಟೆಂಟ್ ಕಮ್ಯಾಂಡೆಂಟ್‌ಗಳಾದ ರಮೇಶ್ ಚಂದ್ರ ಶರ್ಮ, ಶ್ರೀಧರ್ ಬಾಬು, ಕಮಲೇಶ್ ಕುಮಾರ್ ಸಿಂಗ್, ಪ್ರದೀಪ್ ಚೌರಾಸಿಯ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾದ ಮೂರ್ತಪ್ಪ ಹಾಗೂ ಶಿಕ್ಷಕರು ಹಾಜರಿದ್ದರು.