Home News ಕಿಡಿಗೇಡಿಗಳಿಂದ ತೊಂದರೆ

ಕಿಡಿಗೇಡಿಗಳಿಂದ ತೊಂದರೆ

0

ತಾಲ್ಲೂಕಿನ ಎಲ್. ಮುತ್ತುಕದಹಳ್ಳಿ ಗ್ರಾಮದ ಎಂ.ಮಂಜುನಾಥ್ ಎಂಬುವರಿಗೆ ಸೇರಿದ ಹಿಪ್ಪುನೇರಳೆ ಹಾಗು ಗುಲಾಬಿ ತೋಟಕ್ಕೆ ಅಳವಡಿಸಿದ್ದ ಹನಿ ನೀರಾವರಿ ಪೈಪುಗಳು ಸೇರಿದಂತೆ ಗೇಟ್ ವಾಲ್‍ಗಳನ್ನು ಕಿಡಿಗೇಡಿಗಳು ಒಡೆದುಹಾಕಿ ಪೈಪುಗಳನ್ನು ನಾಶಪಡಿಸಿರುವುದಷ್ಟೇ ಅಲ್ಲದೇ ಸುಮಾರು100-150 ಗಿಡಗಳನ್ನು ಬೇರು ಸಮೇತ ಕತ್ತುಹಾಕಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ಮಂಜುನಾಥ್ ತಂದೆ ಮುನಿಕೆಂಪಣ್ಣ ನವರ ಹೆಸರಿನಲ್ಲಿ ಗ್ರಾಮದ ಸರ್ವೇ ನಂ 4/1 ರಲ್ಲಿ 0-22 ಗುಂಟೆ, ಸರ್ವೇ ನಂ 4/2 ರಲ್ಲಿ 0-09 ಗುಂಟೆ ಹಾಗು ಸರ್ವೇ ನಂ 10ರಲ್ಲಿ 1-28 ಗುಂಟೆ ಜಮೀನಿದ್ದು ಈ ಪೈಕಿ ಅರ್ಧದಷ್ಟು ಜಮೀನಿನಲ್ಲಿ ಹಿಪ್ಪುನೇರಳೆ ಹಾಗು ಇನ್ನರ್ಧದಲ್ಲಿ ಗುಲಾಬಿ ಹೂವಿನ ಗಿಡಗಳನ್ನು ನಾಟಿ ಮಾಡಿದ್ದರು ಎನ್ನಲಾಗಿದ್ದು ಜಮೀನಿನಲ್ಲಿ ಅಳವಡಿಸಿದ್ದ ಹನಿ ನೀರಾವರಿ ಪೈಪುಗಳನ್ನು ಕಿತ್ತು ಹಾಕಿರುವುದು ಸೇರಿದಂತೆ ಸುಮಾರು 100-150 ಹೂವಿನ ಗಿಡಗಳನ್ನು ಬುಡ ಸಮೇತ ಕಿತ್ತುಹಾಕಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಹಾಗು ನಮಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮಂಜುನಾಥ್ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!