Home News ಗುಡಿಜಾತ್ರೆಯ ದೀಪಾರಾಧನಾ ಮಹೋತ್ಸವ

ಗುಡಿಜಾತ್ರೆಯ ದೀಪಾರಾಧನಾ ಮಹೋತ್ಸವ

0

ಮೊರಸು ನಾಡೆಂದು ಹೆಸರಿದ್ದ ತಮಿಳುನಾಡಿನ ಮೂಲದ ಒಕ್ಕಲಿಗ ಸಮುದಾಯ ಕರ್ನಾಟಕಕ್ಕೆ ಬಂದ ಚಾರಿತ್ರಿಕ ಇತಿಹಾಸವುಳ್ಳ ಹಂಡಿಗನಾಳದ ಈರಣ ್ಣ– ಕೆಂಪಣ್ಣ ದೇವಾಲಯದಲ್ಲಿ ಸೋಮವಾರ ಗುಡಿಜಾತ್ರೆಯ ದೀಪಾರಾಧನಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದ ಈರಣ ್ಣ– ಕೆಂಪಣ್ಣ ದೇವಾಲಯದಲ್ಲಿ ಸೋಮವಾರ ನಡೆದ ಗುಡಿಜಾತ್ರೆಯ ದೀಪಾರಾಧನಾ ಮಹೋತ್ಸವದಲ್ಲಿ ಕೆ.ಪಿ.ಸಿ.ಸಿ. ಉಪಾಧ್ಯಕ್ಷ ವಿ.ಮುನಿಯಪ್ಪ ಮಾತನಾಡಿದರು. ಆದಿಚುಂಚನಗಿರಿಯ ಮಂಗಳಾನಂದನಾಥ ಸ್ವಾಮೀಜಿ, ನಿವೃತ್ತ ಐ.ಜಿ.ಪಿ ಶಂಕರ್ ಬಿದಿರಿ, ನಿವೃತ್ತ ಎಸ್.ಪಿ. ಎನ್.ನಾಗರಾಜು ಉಪಸ್ಥಿತರಿದ್ದರು.
ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದ ಈರಣ ್ಣ– ಕೆಂಪಣ್ಣ ದೇವಾಲಯದಲ್ಲಿ ಸೋಮವಾರ ನಡೆದ ಗುಡಿಜಾತ್ರೆಯ ದೀಪಾರಾಧನಾ ಮಹೋತ್ಸವದಲ್ಲಿ ಕೆ.ಪಿ.ಸಿ.ಸಿ. ಉಪಾಧ್ಯಕ್ಷ ವಿ.ಮುನಿಯಪ್ಪ ಮಾತನಾಡಿದರು. ಆದಿಚುಂಚನಗಿರಿಯ ಮಂಗಳಾನಂದನಾಥ ಸ್ವಾಮೀಜಿ, ನಿವೃತ್ತ ಐ.ಜಿ.ಪಿ ಶಂಕರ್ ಬಿದಿರಿ, ನಿವೃತ್ತ ಎಸ್.ಪಿ. ಎನ್.ನಾಗರಾಜು ಉಪಸ್ಥಿತರಿದ್ದರು.

ಶಿಥಿಲಗೊಂಡಿದ್ದ ಈರಣ ್ಣ– ಕೆಂಪಣ್ಣ ದೇವಾಲಯವನ್ನು ಎರಡು ದಶಕಗಳ ಹಿಂದೆ ಪುನರ್ಪ್ರತಿಷ್ಠಾಪಿಸಿದ್ದು, ಈಗ ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ಸುಂದರ ದೇವಾಲಯ, ವಸತಿಗೃಹ ಮತ್ತು ಕಲ್ಯಾಣ ಮಂಟಪವನ್ನು ನಿರ್ಮಿಸಲಾಗುತ್ತಿದೆ. ಐದು ವರ್ಷಕ್ಕೊಮ್ಮೆ ನಡೆಯುವ ಗುಡಿಜಾತ್ರೆಯ ದೀಪಾರಾಧನಾ ಮಹೋತ್ಸವಕ್ಕೆ ಹಲವಾರು ಜಿಲ್ಲೆಗಳಿಂದ ಒಕ್ಕಲಿಗ ಸಮುದಾಯದವರು ಬೃಹತ್ ಪ್ರಮಾಣದಲ್ಲಿ ಆಗಮಿಸಿದ್ದರು.
ಹೆಣ್ಣು ಮಕ್ಕಳು ವಿವಿಧ ಹೂಗಳಿಂದ ಅಲಂಕರಿಸಿದ ತಂಬಿಟ್ಟು ದೀಪಗಳನ್ನು ಹೊತ್ತುಕೊಂಡು ಮೆರವಣಿಗೆಯಲ್ಲಿ ದೇವಾಲಯದವರೆಗೂ ಸಾಗಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಆಗಮಿಸಿದ್ದ ಸಾವಿರಾರು ಮಂದಿ ಭಕ್ತರಿಗೆ ದೇವಾಲಯದ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆಯನ್ನು, ಹೆಸರುಬೇಳೆ ಪಾನಕವನ್ನು ಸಹ ಆಯೋಜಿಸಲಾಗಿತ್ತು. ಹಿರಿಯ ದಂಪತಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
‘ಒಕ್ಕಲು ತನಕ್ಕೆ ಮೂಲ ಭೂತಾಯಿ ಮತ್ತು ನೀರು. ಶಾಶ್ವತ ನೀರು ಜಿಲ್ಲೆಗೆ ಬಂದಲ್ಲಿ ನಮ್ಮ ಬಯಲು ಸೀಮೆಯ ಶ್ರಮಿಕರು ಆರ್ಥಿಕವಾಗಿ ಸಬಲರಾಗುತ್ತಾರೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಬೇಕು’ ಎಂದು ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ. ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ಆದಿಚುಂಚನಗಿರಿಯ ಮಂಗಳಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಜಿಲ್ಲಾಧಿಕಾರಿ ಡಾ.ವೆಂಕಟೇಶ್, ನಿವೃತ್ತ ಐ.ಜಿ.ಪಿ ಶಂಕರ್ ಬಿದಿರಿ, ನಿವೃತ್ತ ಎಸ್.ಪಿ. ಎನ್.ನಾಗರಾಜು, ಡಾಟಿ ಸದಾನಂದಗೌಡ, ವಾಣಿ ಕೃಷ್ಣಾರೆಡ್ಡಿ, ಬಿ.ಕೆ.ನಾರಾಯಣಸ್ವಾಮಿ, ಪಿ.ವಿ.ನಾಗರಾಜ್, ಮುನಿಕೃಷ್ಣಪ್ಪ, ಒಕ್ಕಲಿಗರ ಸಂಘದ ನಿರ್ದೇಶಕ ಸತೀಶ್, ಬಿಳಿಶಿವಾಲೆ ರವಿ. ಕೆಂಪರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!