Home News ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮೇಲೂರು ಬಿ.ಎನ್.ರವಿಕುಮಾರ್

ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮೇಲೂರು ಬಿ.ಎನ್.ರವಿಕುಮಾರ್

0

ಸೋಮವಾರ ಸಹಸ್ರಾರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ಜೆಡಿಎಸ್‌ ವರಿಷ್ಠರ ಪತ್ರ ಹಾಗೂ ಪರಿಷ್ಕೃತ ಎ ಮತ್ತು ಬಿ ಫಾರಂ ನೊಂದಿಗೆ ನಾಮಪತ್ರ ಸಲ್ಲಿಸಿದ್ದ ಬಿ.ಎನ್.ರವಿಕುಮಾರ್ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಮಂಗಳವಾರ ಮತ್ತೊಮ್ಮೆ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ನಾಮ ಪತ್ರ ಸಲ್ಲಿಸಿದ ಅವರು ಮಾತನಾಡಿ, ‘ಪಕ್ಷದ ವರಿಷ್ಠರು ಬಿ ಫಾರಂ ಮತ್ತು ಸಿ ಫಾರಂ ಎರಡನ್ನೂ ಕೊಟ್ಟಿದ್ದರು. ಪುನಃ ನಡೆದ ನಾಟಕೀಯ ಬೆಳವಣಿಗೆಗಳಲ್ಲಿ ಹಾಲಿ ಶಾಸಕ ರಾಜಣ್ಣ ಅವರಿಗೆ ನೀಡಿದ್ದಾರೆ ಎಂಬ ಮಾತು ಕೇಳಿ ಬಂತು. ಇದರಿಂದ ನಾವೇನೂ ವಿಚಲಿತರಾಗಿಲ್ಲ, ಹಾಗಂತ ನಾನು ಅವರಂತೆ ಬಿಜೆಪಿಗೆ ಹೋಗುವ ಪ್ರಯತ್ನವೂ ಮಾಡಿಲ್ಲ. ಹೇಗಗಾದರಾಗಲಿ ಎಂದು ನಾಮಪತ್ರವನ್ನು ಈ ದಿನ ಸಲ್ಲಿಸುತ್ತಿದ್ದೇನೆ’ ಎಂದು ಹೇಳಿದರು.

error: Content is protected !!