ತಾಲ್ಲೂಕಿನ ದಿಬ್ಬೂರಹಳ್ಳಿಯಲ್ಲಿ ಈಚೆಗೆ ಶ್ರೀ ಚೌಡೇಶ್ವರಿ ದೇವಿಯ ದೇವಸ್ಥಾನದ ಜೀರ್ಣೋದ್ಧಾರ, ನೂತನ ಗೋಪುರ ಕುಂಭಾಭಿಷೇಕ ಹಾಗೂ ನೂತನ ಧ್ವಜಸ್ತಂಭ ಸ್ಥಾಪನೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಮೂರು ದಿನಗಳ ಕಾಲ ವಿಶೇಷ ಪೂಜೆ, ಹೋಮ, ಅನ್ನಸಂತರ್ಪಣೆ, ಹರಿಕಥೆ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ಸುತ್ತಮುತ್ತಲ ಗ್ರಾಮಗಳಿಂದ ಜನರು ಆಗಮಿಸಿ ಪೂಜಾಕೈಂಕರ್ಯದಲ್ಲಿ ಭಾಗಿಯಾಗಿದ್ದರು.
ಮಾಜಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಆಂಜನೇಯರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ, ಉಪಾಧ್ಯಕ್ಷ ಶ್ರೀರಂಗಪ್ಪ, ಸದಸ್ಯ ಡಿ.ಎ.ಪ್ರಸನ್ನ, ಡಿ.ಎಂ.ಶ್ರೀಧರ್, ಬಾಬಾಜಾನ್, ಗೊರ್ಲಪ್ಪ, ಚಿಕ್ಕನರಸಿಂಹಪ್ಪ ಹಾಜರಿದ್ದರು.