Home News ದುಷ್ಕರ್ಮಿಗಳು ಔಷಧಿ ಸಿಂಪಡಿಸಿದ್ದರಿಂದ ಬೆಳೆ ನಾಶ

ದುಷ್ಕರ್ಮಿಗಳು ಔಷಧಿ ಸಿಂಪಡಿಸಿದ್ದರಿಂದ ಬೆಳೆ ನಾಶ

0

ದುಷ್ಕರ್ಮಿಗಳು ಔಷಧಿಯನ್ನು ಸಿಂಪಡಣೆ ಮಾಡಿರುವ ಪರಿಣಾಮವಾಗಿ ಸುಮಾರು ಒಂದು ಲಕ್ಷ ರೂಪಾಯಿಗಳ ಮೌಲ್ಯದ ರೇಷ್ಮೆಬೆಳೆ ನಷ್ಟವಾಗಿದೆ ಎಂದು ಆನೂರು ಗ್ರಾಮದ ರೈತ ನಾಗರಾಜು ತಿಳಿಸಿದ್ದಾರೆ.
ತಾಲ್ಲೂಕಿನ ಆನೂರು ಗ್ರಾಮದ ನಾಗರಾಜು ಎಂಬ ರೈತ ೩೦೦ ಮೊಟ್ಟೆ ರೇಷ್ಮೆಹುಳುಗಳನ್ನು ಸಾಕಾಣಿಕೆ ಮಾಡಿದ್ದು, ಹುಳುಗಳು ಹಣ್ಣಾಗುವ ಹಂತಕ್ಕೆ ಬಂದಿದ್ದಾಗ, ರಾತ್ರಿಯ ವೇಳೆಯಲ್ಲಿ ದುಷ್ಕರ್ಮಿಗಳು ಹಿಪ್ಪುನೇರಳೆ ತೋಟಕ್ಕೆ ಔಷಧಿ ಸಿಂಪಡಣೆ ಮಾಡಿದ್ದಾರೆ. ಔಷಧಿ ಸಿಂಪಡಣೆಗೊಂಡಿರುವ ಸೊಪ್ಪು ತಿಂದ ಹುಳುಗಳು ಹಣ್ಣಾಗಿಲ್ಲ, ಅಲ್ಪಸ್ವಲ್ಪ ಹಣ್ಣಾಗಿದ್ದು ಅವು ಗೂಡುಕಟ್ಟುತ್ತಿಲ್ಲ. ಇದರಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಒದಗಿಸುವ ಆಸೆಯನ್ನಿಟ್ಟುಕೊಂಡಿದ್ದ ರೈತ ನಾಗರಾಜು ಕುಟುಂಬ ಆತಂಕಕ್ಕೆ ಒಳಗಾಗಿದ್ದಾರೆ.
ಸ್ಥಳಕ್ಕೆ ಬೇಟಿ ನೀಡಿದ್ದ ರೇಷ್ಮೆ ಇಲಾಖೆಯ ವಿಸ್ತರಣಾಧಿಕಾರಿ ಎಂ.ನಾರಾಯಣಸ್ವಾಮಿ ಪರಿಶೀಲನೆ ನಡೆಸಿ ಇಲಾಖೆಯಿಂದ ಯಾವುದೇ ಪರಿಹಾರ ಸಿಗುವುದಿಲ್ಲವೆಂದು ತಿಳಿಸಿದ್ದಾರೆ.

error: Content is protected !!