Home News ದೇಶಭಕ್ತ ಕ್ರಾಂತಿವೀರ ಖುದಿರಾಮ್‌ ಬೋಸ್‌ ಪುಣ್ಯತಿಥಿ ಕಾರ್ಯಕ್ರಮ

ದೇಶಭಕ್ತ ಕ್ರಾಂತಿವೀರ ಖುದಿರಾಮ್‌ ಬೋಸ್‌ ಪುಣ್ಯತಿಥಿ ಕಾರ್ಯಕ್ರಮ

0

ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ದೇಶಭಕ್ತ ಕ್ರಾಂತಿವೀರ ಖುದಿರಾಮ್‌ ಬೋಸ್‌ ಪುಣ್ಯತಿಥಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳನ್ನು ನೀಡಿ ಟಿಪ್ಪು ಸೆಕ್ಯುಲರ್‌ ಸೇನೆಯ ಅಧ್ಯಕ್ಷ ಎಂ.ಮೌಲಾ ಮಾತನಾಡಿದರು.
ಸರ್ಕಾರಿ ಶಾಲೆಗಳು ಗ್ರಾಮದ ದೇಗುಲಗಳಂತೆ. ಮಕ್ಕಳ ಭವಿಷ್ಯದ ಬುನಾದಿಯಾದ ಶಾಲೆಗಳಿಗೆ ನೆರವು ನೀಡಬೇಕು ಎಂದು ಅವರು ತಿಳಿಸಿದರು.
ಪ್ರತಿಯೊಬ್ಬರಿಗೂ ಸಾಮಾಜಿಕ ಬದ್ಧತೆ ಇರಬೇಕು. ನಮ್ಮನ್ನು ಬೆಳೆಸಿದ ಸಮಾಜಕ್ಕೆ ನಾವು ಋಣಿಗಳಾಗಿರಬೇಕು. ಸಾಧ್ಯವಾದಷ್ಟೂ ಇತರರಿಗೆ ನೆರವಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಿಗೆ ಪ್ರೋತ್ಸಾಹಿಸುತ್ತಾ ಅಗತ್ಯ ನೆರವು ನೀಡುವುದು ಬಹು ಮುಖ್ಯವಾದುದು. ಮಕ್ಕಳಿಗೂ ಸಹಾಯ ಮಾಡುವ ಮನೋಭಾವವನ್ನು ತಿಳಿಸಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಹೇಳಿದರು.
ಶಿಕ್ಷಕ ಎಸ್‌.ಚಾಂದ್‌ಪಾಷ, ದೇಶಭಕ್ತ ಕ್ರಾಂತಿವೀರ ಖುದಿರಾಮ್‌ ಬೋಸ್‌ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಟಿಪ್ಪು ಸೆಕ್ಯುಲರ್‌ ಸೇನೆಯ ಉಪಾಧ್ಯಕ್ಷ ಇಂತಿಯಾಸ್‌, ಮಾನವ ಹಕ್ಕುಗಳ ಆಯೋಗದ ಪ್ರದೀಪ್‌, ಸಮೀವುಲ್ಲ, ಮುಜ್ಜು, ಶಂಕರ್‌, ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪ ರಾಮಚಂದ್ರ, ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್‌, ಮುಖ್ಯಶಿಕ್ಷಕಿ ಎಂ.ವೆಂಕಟರತ್ನಮ್ಮ, ಶಿಕ್ಷಕರಾದ ಅಶೋಕ್‌, ಭಾರತಿ, ಸಿಬ್ಬಂದಿ ವೆಂಕಟಮ್ಮ, ಗ್ರಾಮಸ್ಥ ಮುನಿಕೃಷ್ಣಪ್ಪ ಹಾಜರಿದ್ದರು.

error: Content is protected !!