Home News ನಗರದ ನಿವಾಸಿ ಜನಪದತಜ್ಞ ಡಾ.ಜಿ.ಶ್ರೀನಿವಾಸಯ್ಯ ಅವರ ‘ತಣಿಗೆ’ ಕೃತಿಗೆ ಪ್ರಶಸ್ತಿ

ನಗರದ ನಿವಾಸಿ ಜನಪದತಜ್ಞ ಡಾ.ಜಿ.ಶ್ರೀನಿವಾಸಯ್ಯ ಅವರ ‘ತಣಿಗೆ’ ಕೃತಿಗೆ ಪ್ರಶಸ್ತಿ

0

ನಗರದ ನಿವಾಸಿ ಜನಪದತಜ್ಞ ಡಾ.ಜಿ.ಶ್ರೀನಿವಾಸಯ್ಯ ಅವರ ಕೃತಿ ‘ತಣಿಗೆ’ಗೆ ಈಚೆಗೆ ಬಾಗಲಕೋಟದಲ್ಲಿ ನಡೆದ 6ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಲಾಗಿದೆ.
ತಣಿಗೆ ಕೃತಿಯು ಜನಪದ ತಜ್ಞ ಡಾ.ಶ್ರೀನಿವಾಸಯ್ಯ ಅವರ ಜನಪದ ಲೇಖನಗಳ ಸಂಗ್ರಹವಾಗಿದೆ. ಸಮ್ಮೇಳನದಲ್ಲಿ ಸಂಶೋಧನಾ ವಿಭಾಗದಲ್ಲಿ ಈ ಕೃತಿಯನ್ನು ಆಯ್ಕೆ ಮಾಡಲಾಗಿದ್ದು, ಯಲ್ಲಪ್ಪ ಗೋಳಸಂಗಿ ದತ್ತಿ ನಿಧಿಯ ಪ್ರಶಸ್ತಿ ಪತ್ರ, ಎರಡು ಸಾವಿರ ನಗದು, ಫಲಕ ಹಾಗೂ ಪದಕವನ್ನು ನೀಡಲಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ, ಸಮ್ಮೇಳನಾಧ್ಯಕ್ಷ ಡಾ.ಸತ್ಯಾನಂದ ಪಾತ್ರೋಟ, ಡಾ.ಮಲ್ಲಿಕಾರ್ಜುನ ಸಿದ್ದಣ್ಣನವರ, ಡಾ.ಚಲುವರಾಜ, ಎಂ.ವೆಂಕಟಸ್ವಾಮಿ, ಆರ್.ಮೋಹನರಾಜ್, ಅರ್ಜುನ ಗೊಳಸಂಗಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!