Home News ನಾಯಿಗಳ ದಾಳಿಗೆ ತುತ್ತಾದ ಕೃಷ್ಣಮೃಗವನ್ನು ರಕ್ಷಿಸಿದ ಗ್ರಾಮಸ್ಥರು

ನಾಯಿಗಳ ದಾಳಿಗೆ ತುತ್ತಾದ ಕೃಷ್ಣಮೃಗವನ್ನು ರಕ್ಷಿಸಿದ ಗ್ರಾಮಸ್ಥರು

0

ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಾಲಯದ ತಪ್ಪಲಿನಲ್ಲಿ ನಾಯಿಗಳ ದಾಳಿಗೆ ತುತ್ತಾದ ಕೃಷ್ಣಮೃಗವನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.
ನಾಯಿಗಳ ದಾಳಿಗೆ ಸಿಕ್ಕಿ ಸಾವು ಬದುಕಿನ ಬಗ್ಗೆ ಹೋರಾಟ ಮಾಡುತ್ತಿದ್ದ ಮಳಮಾಚನಹಳ್ಳಿಯ ರಘು ಹಾಗೂ ಅವರ ಸ್ನೇಹಿತರು ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಪಶುವೈದ್ಯ ಡಾ. ಮಧು ಕೃಷ್ಣ ಮೃಗಕ್ಕೆ ಚಿಕಿತ್ಸೆ ನೀಡಿ ಅದು ಚೇತರಿಸಿ ಕೊಂಡನಂತರ ಅರಣ್ಯ ಇಲಾಖೆಯವರಿಗೆ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಒಪ್ಪಿಸಿದರು.
ಅರಣ್ಯ ಇಲಾಖೆ ಅಧಿಕಾರಿ ಭಾಸ್ಕರ್‌ ಕೃಷ್ಣಮೃಗವನ್ನು ತಾಲ್ಲೂಕಿನ ಕನ್ನಮಂಗಲದ ಅರಣ್ಯಕ್ಕೆ ಕಳುಹಿಸಿ ಕೊಟ್ಟರು. ಈ ಸಂದರ್ಭದಲ್ಲಿ ಡಾಕ್ಟರ್ ಮಧು, ವೆಂಕಟೇಶ್, ಗ್ರಾಮದ ರಘು, ಸುನಿಲ್, ಮಂಜುನಾಥ ಹಾಜರಿದ್ದರು

error: Content is protected !!