Home News ನಿಧನ ವಾರ್ತೆ – ಶಾಸಕ ಎಂ.ರಾಜಣ್ಣ ಅವರಿಗೆ ಪಿತೃ ವಿಯೋಗ

ನಿಧನ ವಾರ್ತೆ – ಶಾಸಕ ಎಂ.ರಾಜಣ್ಣ ಅವರಿಗೆ ಪಿತೃ ವಿಯೋಗ

0

ಶಾಸಕ ಎಂ.ರಾಜಣ್ಣ ಅವರ ತಂದೆ ಎಂ.ಬಿ.ಮುನಿಯಪ್ಪ (79) ಶುಕ್ರವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶುಕ್ರವಾರ ಬೆಳಿಗ್ಗೆ ಹೃದಯಾಘಾತಕ್ಕೆ ಒಳಗಾಗಿ ಇಹಲೋಕವನ್ನು ತ್ಯಜಿಸಿದ್ದಾರೆ. ಅವರು ಪತ್ನಿ, ಮಕ್ಕಳಾದ ಶಾಸಕ ಎಂ.ರಾಜಣ್ಣ ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ಶುಕ್ರವಾರ ಸಂಜೆ ನೆರವೇರಿಸಲಾಯಿತು. ಮುಖಂಡರಾದ ವಿ.ಮುನಿಯಪ್ಪ, ಮೇಲೂರು ಬಿ.ಎನ್‌.ರವಿಕುಮಾರ್‌, ಆಂಜಿನಪ್ಪ ಪುಟ್ಟು, ಎಚ್‌.ಸುರೇಶ್‌, ಡಾ.ಧನಂಜಯರೆಡ್ಡಿ, ಅಫ್ಸರ್‌ ಪಾಷ, ತಾದೂರು ರಘು, ದೊಣ್ಣಹಳ್ಳಿ ರಾಮಣ್ಣ ಮತ್ತಿತರರು ಭೇಟಿ ನೀಡಿ ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಿ ಶಾಸಕರಿಗೆ ಸಾಂತ್ವನ ಹೇಳಿದ್ದಾರೆ.

error: Content is protected !!