Home News ‘ಪೇಟುರಾಮ್‌’ ನ ರಿಂಗ್‌ ನಿಂದ ಬಾಲಕನಿಗೆ ಅನಾಹುತ

‘ಪೇಟುರಾಮ್‌’ ನ ರಿಂಗ್‌ ನಿಂದ ಬಾಲಕನಿಗೆ ಅನಾಹುತ

0

ಚಾಕೋಲೇಟ್‌ನೊಂದಿಗೆ ಬಂದ ರಿಂಗನ್ನು ಎರಡೂವರೆ ವರ್ಷದ ಬಾಲಕನೊಬ್ಬ ನುಂಗಿದ್ದು, ಆ ರಿಂಗ್‌ ಶ್ವಾಸಕೋಶದಲ್ಲಿ ಸಿಕ್ಕಿಹಾಕಿಂಡಿರುವ ಘಟನೆ ಗುರುವಾರ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಗಾರ್ಡನ್‌ ರಸ್ತೆಯ ದರ್ಗಾ ಮೊಹಲ್ಲಾದ ವಾಸಿ ಜಬೀವುಲ್ಲಾ ಅವರ ಮಗ ಶಹಬಾಸ್‌ ರಿಂಗನ್ನು ನುಂಗಿರುವ ದರ್ದೈವಿ. ‘ಪೇಟುರಾಮ್‌’ ಎಂಬ ಹೆಸರಿನ 2 ರೂಪಾಯಿಗಳ ಚಾಕೋಲೇಟ್‌ನಲ್ಲಿ ಮಕ್ಕಳ ಆಕರ್ಷಣೆಗಾಗಿ ಚಾಕೋಲೇಟ್‌ನೊಂದಿಗೆ ರಿಂಗು, ದಾರ, ಗೊಂಬೆ ಉಚಿತವಾಗಿ ನೀಡಲಾಗುತ್ತಿದ್ದು ಎಳೆ ಮಕ್ಕಳು ಅರಿಯದೇ ನುಂಗಿ ಅನಾಹುತ ಮಾಡಿಕೊಳ್ಳುವಂತಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಎಕ್ಸ್‌ರೇ ತೆಗೆದ ವೈದ್ಯರು ರಿಂಗನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯಬೇಕೆಂದು ತಿಳಿಸಿದ್ದಾರೆ. ಮಗುವಿನ ಪೋಷಕರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ತಮಗೆ ಸಹಾಯ ಮಾಡುವಂತೆ ಹಾಗೂ ಈ ರೀತಿಯ ಅನಾಹುತ ಬೇರೆ ಮಕ್ಕಳಿಗಾಗದಂತೆ ಈ ಚಾಕೋಲೇಟ್‌ ನಿಷೇಧಿಸಬೇಕು. ಈ ರೀತಿಯಾದ ಚಾಕಲೇಟ್‌ಗಳನ್ನು ತಯಾರಿಸುವ ಕಂಪನಿಯ ಮೇಲೆ ಸೂಕ್ತ ಕ್ರಮ ಜರುಗಿಸಿ ಮುಚ್ಚಿಸಬೇಕು, ಯಾವ ಅಂಗಡಿಗಳಲ್ಲಿ ಮಾರಾಟವಾಗದಂತೆ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ ಮಾತನಾಡಿ, ಈ ರೀತಿಯ ಚಾಕೋಲೇಟ್‌ ತಯಾರಿಕಾ ಕಂಪೆನಿ ಹಾಗೂ ಮಾರಾಟಗಾರರ ವಿರುದ್ಧ ಮೇಲಧಿಕಾರಿಗಳಿಗೆ ತಿಳಿಸಿ ಕ್ರಮ ಜರುಗಿಸುವುದಾಗಿ ತಿಳಿಸಿದರು.

error: Content is protected !!