ಒಳ್ಳೆಯ ಪುಸ್ತಕ ಒಬ್ಬ ಉತ್ತಮ ಸ್ನೇಹಿತನಂತೆ. ದಿನಪತ್ರಿಕೆಯಲ್ಲಿನ ವಿಷಯ ಸಂಗ್ರಹವನ್ನು ಕ್ರೋಕರಿಸಿಟ್ಟುಕೊಳ್ಳುವ ಮೂಲಕ ಮಾಹಿತಿ ಕೋಶವನ್ನು ತಯಾರಿಸಿಟ್ಟುಕೊಳ್ಳಬಹುದು ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ ತಿಳಿಸಿದರು.
ತಾಲ್ಲೂಕಿನ ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಿಕ್ಷಕ ದೇವರಾಜ್ ಅವರು ‘ಪ್ರಜಾವಾಣಿ’ ಲೇಖನಗಳ ಪುಸ್ತಕ ರೂಪದ ಸಂಗ್ರಹದ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಜಾವಾಣಿ’ ಪತ್ರಿಕೆಯ ದೇವಾಲಯ ದರ್ಶನ, ವಿಜ್ಞಾನ ವಿಶೇಷ, ಬಾಲ ಬುತ್ತಿ, ಪುರಾಣ ಪದ, ವಿಸ್ಮಯ ಜಗತ್ತು, ಸಾಧಕರು, ತಾಲ್ಲೂಕು ವಿಶೇಷ ಸುದ್ದಿ, ಜಿಲ್ಲಾ ವಿಶೇಷ ಸುದ್ದಿ, ನಮ್ಮ ಕ್ಯಾಂಪಸ್, ಮಳೆ ಅಬ್ಬರ, ದುರಂತಗಳ ಸರಮಾಲೆ, ನಮ್ಮೂರು ನಮ್ಮಜಿಲ್ಲೆ, ಚಿತ್ರ ಸ್ವಾರಸ್ಯ, ಕ್ರೀಡಾ ವಿಶೇಷ, ಪುಟ್ಟಿ ರಾಮನ್ ಚಿತ್ರ ಸರಣಿ ಹೀಗೆ ಹಲವಾರು ವಿಷಯಗಳ ಸಂಗ್ರಹವನ್ನು ಶಿಕ್ಷಕ ದೇವರಾಜ್ ಪ್ರದರ್ಶಿಸಿದ್ದರು.
ಮುಖ್ಯ ಶಿಕ್ಷಕಿ ಸರಸ್ವತಮ್ಮ, ಸಹಶಿಕ್ಷಕರಾದ ಗಣೇಶ್ಬಾಬು, ಮಂಜುನಾಥ್, ತ್ರಿವೇಣಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.