Home News ಭಕ್ತರಹಳ್ಳಿಯ ಬಿ.ಎಂ.ವಿ ವಿದ್ಯಾಸಂಸ್ಥೆಯಲ್ಲಿ ರೋಟರಿ ಇಂಟರಾಕ್ಟ್ ಕ್ಲಬ್‌ನ ಕಾರ್ಯಕ್ರಮ

ಭಕ್ತರಹಳ್ಳಿಯ ಬಿ.ಎಂ.ವಿ ವಿದ್ಯಾಸಂಸ್ಥೆಯಲ್ಲಿ ರೋಟರಿ ಇಂಟರಾಕ್ಟ್ ಕ್ಲಬ್‌ನ ಕಾರ್ಯಕ್ರಮ

0

ಶಾಲೆಯಲ್ಲಿ ರೋಟರಿ ಇಂಟರಾಕ್ಟ್ ಕ್ಲಬ್ ಪ್ರಾರಂಭಿಸುವ ಮೂಲಕ ಮಕ್ಕಳಲ್ಲಿ ಸೇವಾ ಮನೋಭಾವ, ದೇಶಪ್ರೇಮ, ಪರಿಸರ ಕಾಳಜಿ ಮತ್ತು ಇತರರಿಗೆ ಕೊಡುವ ಮನೋಭಾವವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಶ್ಲಾಘನೀಯ ಎಂದು ರೋಟರಿ ಬೆಂಗಳೂರು ಸೆಂಟಿನಿಯಲ್‌ ಕ್ಲಬ್‌ ಅಧ್ಯಕ್ಷ ರಮಣನ್‌ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ ವಿದ್ಯಾಸಂಸ್ಥೆಯಲ್ಲಿ ಈಚೆಗೆ ರೋಟರಿ ಇಂಟರಾಕ್ಟ್ ಕ್ಲಬ್‌ನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೋಟರಿ ಚಟುವಟಿಕೆಗಳಲ್ಲಿ ಎಳೆಯ ವಯಸ್ಸಿನಿಂದಲೇ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಸಾಮರ್ಥ್ಯ ವೃದ್ಧಿ ಹಾಗೂ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ ಎಂದು ಹೇಳಿದರು.
ಬಿ.ಎಂ.ವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್‌.ಕಾಳಪ್ಪ ಮಾತನಾಡಿ, ಬಿ.ಎಂ.ವಿ ವಿದ್ಯಾಸಂಸ್ಥೆಯ ವಿದ್ಯಾರ್ಥೀಗಳು ರೋಟರಿ ಇಂಟರಾಕ್ಟ್ ಕ್ಲಬ್‌ನ ಅಡಿಯಲ್ಲಿ ಕಳೆದ 3 ವರ್ಷಗಳಿಂದ ಪಲ್ಸ್‌ ಪೋಲಿಯೋ, ಸ್ವಚ್ಛ ಗ್ರಾಮ, ಮುಷ್ಠಿ ತುಂಬಾ ಅಕ್ಕಿ ಮತ್ತು ರಾಗಿ ಯೋಜನೆ, ಕ್ಷಯ, ಕ್ಯಾನ್ಸರ್‌ ರೋಗಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ವೃದ್ಧಶ್ರಮಗಳಿಗೆ ಬಟ್ಟೆ ವಿತರಿಸುತ್ತಿದ್ದಾರೆ ಎಂದು ಹೇಳಿದರು.
ರೊಟೇರಿಯನ್‌ ಎನ್‌.ಟಿ.ಸಾಗರ್‌ ಮತ್ತು ಎಂ.ಎಸ್‌.ಮಂಜುನಾಥ್‌ ಬಿ.ಎಂ.ವಿ.ಪ್ರೌಢಶಾಲೆಗೆ 35 ಕಂಪ್ಯೂಟರ್‌ಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದರು.
ಕಳೆದ ವರ್ಷದ ರೋಟರಿ ಇಂಟರಾಕ್ಟ್ ಕ್ಲಬ್‌ನ ಅಧ್ಯಕ್ಷೆಯಾಗಿದ್ದ 10 ನೇ ತರಗತಿಯ ಕಲ್ಯಾಣಿ ನೂತನವಾಗಿ ಅಧ್ಯಕ್ಷೆಯಾಗಿ ಪದಗ್ರಹಣ ಮಾಡಿದ 9ನೇ ತರಗತಿಯ ಹರ್ಷಿಣಿಗೆ ಕ್ಲಬ್‌ನ ಅಧಿಕಾರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳು ಮುಷ್ಠಿ ತುಂಬಾ ಅಕ್ಕಿ ಮತ್ತು ರಾಗಿ ಯೋಜನೆಯಲ್ಲಿ ಸಂಗ್ರಹಿಸಿದ್ದ 2 ಕ್ವಿಂಟಾಲ್‌ ಅಕ್ಕಿ ಮತ್ತು 2 ಕ್ವಿಂಟಾಲ್‌ ರಾಗಿಯನ್ನು ವಿಜಯಪುರದ ಬಳಿಯ ಸರ್ವೋದಯ ಸೇವಾ ಸಂಸ್ಥೆಯ ವೃದ್ಧಾಶ್ರಮಕ್ಕೆ ನೀಡಿದರು.
ಬಿ.ಎಂ.ವಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಟ್ರಸ್ಟಿ ಎಸ್‌.ನಾರಾಯಣಸ್ವಾಮಿ, ರೊಟೇರಿಯನ್‌ ಬಸವರಾಜು, ಮುಖ್ಯಶಿಕ್ಷಕ ಎನ್‌.ವೆಂಕಟಮೂರ್ತಿ, ಶಿಕ್ಷಕರಅದ ಟಿ.ಜಿ.ವೆಂಕಟೇಶ್‌, ಉಷಾರಾಣಿ, ಎನ್‌.ಪಂಚಮೂರ್ತಿ ಹಾಜರಿದ್ದರು.

error: Content is protected !!