Home News ಭಗತ್‌ಸಿಂಗ್ ರ ೧೧೧ನೇ ಜಯಂತಿ ಕಾರ್ಯಕ್ರಮ

ಭಗತ್‌ಸಿಂಗ್ ರ ೧೧೧ನೇ ಜಯಂತಿ ಕಾರ್ಯಕ್ರಮ

0

ನಗರದ ಎ.ಆರ್.ಎಂ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶ್ರೀ ಶಾರದ ವಿದ್ಯಾಸಂಸ್ಥೆ ಮತ್ತು ಎನ್.ಎಸ್.ಯು.ಐ ಸಹಯೋಗದಲ್ಲಿ ಗುರುವಾರ ಆಯೋಜಿಸಲಾಗಿದ್ದ ಭಗತ್‌ಸಿಂಗ್ ರ ೧೧೧ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಎನ್.ಎಸ್.ಯು.ಐ ರಾಜ್ಯಸಂಚಾಲಕ ಕೆ.ಎನ್.ಮುನೀಂದ್ರ ಮಾತನಾಡಿದರು.
ಕ್ರಾಂತಿಕಾರಿ ಭಗತ್‌ಸಿಂಗ್‌ರ ತತ್ವಾದರ್ಶಗಳನ್ನು ಪ್ರತಿಯೊಬ್ಬ ಯುವಕರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜ ಸದೃಢವಾಗಲು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಗತ್‌ಸಿಂಗ್ ರಂತಹ ಮಹಾನ್ ವ್ಯಕ್ತಿಗಳ ತತ್ವ, ಆದರ್ಶಗಳನ್ನು ಯುವಸಮೂಹ ಅಳವಡಿಸಿಕೊಳ್ಳಬೇಕು. ಲಕ್ಷಾಂತರ ಹೋರಾಟಗಾರರು ನೆತ್ತರು ಹರಿಸಿ, ಪ್ರಾಣತ್ಯಾಗ ಮಾಡಿದ ಫಲವಾಗಿ ನಮಗೆ ಸ್ವಾತಂತ್ರ್ಯ ಬಂದಿದೆ. ಅಂತಹ ಸ್ವಾತಂತ್ರ್ಯ ಅನುಭವಿಸುತ್ತಿರುವ ನಾವುಗಳು ನಮ್ಮ ಮಕ್ಕಳಿಗೆ ದೇಶದ ಇತಿಹಾಸ ತಿಳಿಸಿಕೊಡುವಲ್ಲಿ ವಿಫಲವಾಗಿದ್ದೇವೆ. ಹಾಗಾಗಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಗಳನ್ನು ನಮ್ಮ ಮಕ್ಕಳಿಗೆ ತಿಳಿಸುವುದೂ ಸೇರಿದಂತೆ ಮಕ್ಕಳಲ್ಲಿ ನಿಜವಾದ ದೇಶಾಭಿಮಾನ ಮೂಡಿಸುವ ಕೆಲಸ ಮಾಡಬೇಕು ಎಂದರು.
ಉಪನ್ಯಾಸಕ ಚಂದ್ರಶೇಖರ್ ಮಾತನಾಡಿ, ಇಂದಿನ ಯುವ ಸಮೂಹ ಕೇವಲ ಹಣ ಸಂಪಾದನೆ ಮಾಡುವುದೊಂದೇ ಜೀವನ ಎಂದು ಕೊಂಡಿದ್ದಾರೆ. ಕೇವಲ ತಾವು ಬದುಕಿದರಷ್ಟೇ ಸಾಕು ಎಂಬಷ್ಟು ಸ್ವಾರ್ಥಿಗಳಾಗಿ ಬಿಟ್ಟಿದ್ದಾರೆ. ದೇಶದ ಇತಿಹಾಸ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಹೋರಾಟಗಾರರ ಜೀವನ ತಿಳಿಯದ ನಮಗೆ ದೇಶದ ಪರಂಪರೆ ಹಾಗು ದೇಶದ ಬಗ್ಗೆ ಗೌರವ, ಅಭಿಮಾನ ಹೇಗೆ ಮೂಡಲು ಸಾಧ್ಯವಾದೀತು. ಹಾಗಾಗಿ ಇಂದಿನ ಯುವಕರು ಕ್ರಾಂತಿಕಾರಿ ಭಗತ್‌ಸಿಂಗ್ ಸೇರಿದಂತೆ ಹೋರಾಟಗಾರರ ಆದರ್ಶಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎಂ.ಆರ್.ರಾಘವೇಂದ್ರ, ಉಪಪ್ರಾಂಶುಪಾಲ ಚಾಂದ್‌ಪಾಷ, ಮುಖ್ಯೋಪಾದ್ಯಾಯಿನಿ ವಿಜಯ ಹಾಜರಿದ್ದರು.

error: Content is protected !!