Home News ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರ ಸಭೆ: ಸಾರ್ವಜನಿಕರಿಂದ ಕುಂದುಕೊರತೆಗಳ ಅರ್ಜಿ ಸ್ವೀಕಾರ

ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರ ಸಭೆ: ಸಾರ್ವಜನಿಕರಿಂದ ಕುಂದುಕೊರತೆಗಳ ಅರ್ಜಿ ಸ್ವೀಕಾರ

0

ಯಾವುದೆ ಇಲಾಖೆಯಲ್ಲಿ ಅಧಿಕಾರಿಗಳು ಅಥವಾ ಸಿಬ್ಬಂದಿಯು ಯಾವುದೆ ಕೆಲಸ ಕಾರ್ಯವನ್ನು ಸಕಾಲಕ್ಕೆ ಮಾಡಿಕೊಡದೆ ಉದ್ದೇಶಪೂರ್ವಕವಾಗಿ ವಿಳಂಭ, ಲಂಚಕ್ಕಾಗಿ ಪೀಡನೆ ಮಾಡಿದರೆ ಅಂತಹಹವರ ವಿರುದ್ದ ನಮಗೆ ನೀವು ದೂರು ನೀಡಬಹುದು ಎಂದು ಎಸಿಬಿ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಭು ಮಾಚಯ್ಯ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು ಸಾರ್ವಜನಿಕರಿಂದ ದೂರು ದುಮ್ಮಾನಗಳನ್ನು ಸ್ವೀಕರಿಸುವ ಸಭೆಯಲ್ಲಿ ಅವರು ಮಾತನಾಡಿದರು. ಲಂಚ ಕೊಡುವುದು ಎಷ್ಟು ತಪ್ಪೋ ತೆಗೆದುಕೊಳ್ಳುವುದು ಅಷ್ಟೆ ತಪ್ಪು. ಅಧಿಕಾರಿಗಳು ಲಂಚ ಕೇಳಿ ವಿನಾಕಾರಣ ಕೆಲಸ ಕಾರ್ಯಗಳನ್ನು ವಿಳಂಬ ಮಾಡಿದರೆ ನಮಗೆ ನೀವು ದೂರು ಕೊಡಬಹುದು. ನಿಮ್ಮ ಹೆಸರನ್ನು ಗೌಪ್ಯವಾಗಿ ಇಡಲಾಗುವುದು, ಮುಂದಿನ ಕಾರ್ಯಾಚರಣೆಯನ್ನು ನಾವು ನಿಮಗೆ ಹೇಳುತ್ತೇವೆ ಎಂದರು.
ಕೇವಲ ಇಲ್ಲಿ ಮಾತ್ರವೇ ನೀಡುವುದಲ್ಲ, ನಮ್ಮ ಕಚೇರಿಗೆ ಬಂದೂ ದೂರು ನೀಡಬಹುದು, ದೂರು ನೀಡುವವರು ಲಿಖಿತವಾಗಿ ಅರ್ಜಿ ಕೊಡಬೇಕು, ನಿರ್ಧಿಷ್ಟವಾದ ಪ್ರಕರಣದ ಬಗ್ಗೆ ದೂರು ನೀಡಿ ನಿಮ್ಮ ಹೆಸರು ವಿಳಾಸ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಕೊಡಬೇಕೆಂದು ಮನವಿ ಮಾಡಿದರು.
ಕಂದಾಯ ಇಲಾಖೆ, ತಾಲ್ಲೂಕು ಪಂಚಾಯಿತಿ, ಶಿಕ್ಷಣ ಇಲಾಖೆ ಸೇರಿದಂತೆ ವಿವಿದ ಇಲಾಖೆಗಳಿಗೆ ಸಂಬಂಧಿಸಿದ ೯ ಅರ್ಜಿಗಳು ಸಲ್ಲಿಕೆ ಆದವು.
ಎಸಿಬಿ ಸರ್ಕಲ್ ಇನ್ಸ್‌ಪೆಕ್ಟರ್ ಲಕ್ಷ್ಮೀದೇವಮ್ಮ, ತಹಸೀಲ್ದಾರ್ ಅಜಿತ್ ಕುಮಾರ್, ಇಒ ವೆಂಕಟೇಶ್, ಆಯುಕ್ತ ಚಲಪತಿ ಹಾಜರಿದ್ದರು.

error: Content is protected !!