Home News ಮತದಾನದ ಅರಿವು ಮೂಡಿಸುವ ‘ಆಧಾರ್‌’ ಕಿರುಚಿತ್ರ ಬಿಡುಗಡೆ

ಮತದಾನದ ಅರಿವು ಮೂಡಿಸುವ ‘ಆಧಾರ್‌’ ಕಿರುಚಿತ್ರ ಬಿಡುಗಡೆ

0

ಮತದಾನದ ಅರಿವು ಮೂಡಿಸುವ ‘ಆಧಾರ್‌’ ಎಂಬ ಕಿರುಚಿತ್ರವನ್ನು ಡಾ.ರಾಜ್‌ಕುಮಾರ್‌ ಅವರ ಜನ್ಮದಿನದಂದು ಬಿಡುಗಡೆ ಮಾಡಲು ಹರ್ಷವಾಗುತ್ತಿದೆ ಎಂದು ಕಿರಿಚಿತ್ರ ನಿರ್ದೇಶಕ ಮೇಲೂರು ರಂಗ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಹೊರವಲಯದ ಭಟ್ರೇನಹಳ್ಳಿ ಸಾಯಿನಾಥ ಜ್ಞಾನಮಂದಿರದಲ್ಲಿ ಮಂಗಳವಾರ ‘ಆಧಾರ್‌’ ಎಂಬ ಕಿರುಚಿತ್ರವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮತದಾನದಲ್ಲಿ ಅಡ್ಡಮತದಾನ ನಡೆಯುವ ಪ್ರಯತ್ನದಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆಯನ್ನು ಅಳವಡಿಸಬೇಕು. ಹೆಬ್ಬೆಟ್ಟಿನ ಗುರುತನ್ನು ಬಳಸಿ ವ್ಯಕ್ತಿಯನ್ನು ಗುರುತಿಸಿ ಮತದಾನ ನಡೆಸುವ ಯಂತ್ರದ ಬಗ್ಗೆಯೂ ಈ ಚಿತ್ರದಲ್ಲಿ ಸಂದೇಶವಿದೆ. ಮತದಾನ ನಮ್ಮ ಕರ್ತವ್ಯ, ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ನಮ್ಮ ಹಕ್ಕನ್ನು ಸ್ಥಾಪಿಸಬೇಕು ಎಂಬ ವಿಚಾರವನ್ನು ತಿಳಿಸುವ ಹಿನ್ನೆಲೆಯಲ್ಲಿ ಮತದಾನ ಯಂತ್ರದ ತಾಂತ್ರಿಕತೆಯ ಬಗ್ಗೆಯೂ ಹೊಸ ಹೊಳಹುಗಳಿವೆ ಎಂದು ವಿವರಿಸಿದರು.
‘ಆಧಾರ್‌’ ಕಿರುಚಿತ್ರದ ನಿರ್ಮಾಪಕ ಚೇತನ್‌ಗೌಡ, ನೃತ್ಯ ಕಲಾವಿದ ಸಿ.ಎನ್‌.ಮುನಿರಾಜು, ನಟ ರವಿಕಿರಣ್‌, ನಟಿಯರಾದ ಸುಷ್ಮ, ಮಾಧವಿ, ಕಾರ್ತಿಕ್‌, ಮಂಜುನಾಥ್‌, ಮಹೇಶ್‌, ಮಂಜು, ನರೇಂದ್ರ ಹಾಜರಿದ್ದರು.

error: Content is protected !!