ನಗರದ ಕೋಟೆ ವೃತ್ತದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿದರು.
ದೇಶ ಕಂಡ ಅಪ್ರತಿಮ ಪ್ರಧಾನಿ, ಅಜಾತಶತ್ರು, ಅಪರೂಪದ ರಾಜಕಾರಣಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ಅವರು ತಿಳಿಸಿದರು.
ಆರ್‌ಎಸ್‌ಎಸ್ ಕಾರ್ಯಕರ್ತರಾಗಿ, ತುರ್ತು ಪರಿಸ್ಥಿತಿಯಲ್ಲಿ ಹೋರಾಟ ಮಾಡಿ, ಬಿಜೆಪಿಯನ್ನು ಅಧಿಕಾರಕ್ಕೆ ತಂದ ಅವರ ಬದುಕು, ಧ್ಯೇಯ, ತತ್ವಾದರ್ಶ, ವಾಗ್ಝರಿ, ದಿಟ್ಟ ನಿಲುವು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ. ದೇಶ ಕಂಡ ಅಪ್ರತಿಮ ಪ್ರಧಾನಿ, ಅಜಾತಶತ್ರು, ಕವಿ ಹೃದಯಿ, ಮಾನವತಾವಾದಿ, ಮುತ್ಸದ್ಧಿ, ಅಸ್ಖಲಿತ ವಾಗ್ಮಿಯಾಗಿದ್ದ ವಾಜಪೇಯಿಯವರನ್ನು ವಿರೋಧ ಪಕ್ಷದವರೂ ಸಹ ಮೆಚ್ಚುತ್ತಿದ್ದರು ಎಂದು ಹೇಳಿದರು.
ಅಟಲ್‌ಜೀ ಇಂದು ನಮ್ಮ ಜೊತೆಗಿಲ್ಲ. ಆದರೆ, ಅವರ ಪ್ರೇರಣೆ, ಮಾರ್ಗದರ್ಶನವು ಪ್ರತಿಯೊಬ್ಬ ಭಾರತೀಯ, ಬಿಜೆಪಿ ಕಾರ್ಯಕರ್ತನಿಗೆ ಎಂದೆಂದಿಗೂ ಸಿಗುತ್ತಲೇ ಇರುತ್ತದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಸುರೇಂದ್ರಗೌಡ, ದಾಮೋದರ್, ಮಂಜುಳಮ್ಮ, ಪುರುಷೋತ್ತಮ್, ಮುನಿರಾಜು, ನರೇಶ್, ರೈತಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಪ್ರತೀಶ್, ಎ.ಎಸ್.ರವಿ, ಮಂಜುನಾಥ್ ಹಾಜರಿದ್ದರು.