Home News ರೀಲರುಗಳ ಸಮಸ್ಯೆಗಳನ್ನು ಪರಿಹರಿಸಿಕೊಡಬೇಕೆಂದು ಮನವಿ

ರೀಲರುಗಳ ಸಮಸ್ಯೆಗಳನ್ನು ಪರಿಹರಿಸಿಕೊಡಬೇಕೆಂದು ಮನವಿ

0

ರೇಷ್ಮೆ ನೂಲು ಬಿಚ್ಚುವ ರೀಲರುಗಳ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸಿಕೊಡಬೇಕೆಂದು ಸಿಲ್ಕ್‌ ಸಿಟಿ ರೀಲರ್ಸ್‌ ವೆಲ್‌ಫೇರ್‌ ಅಸೋಸಿಯೇಷನ್ಸ್‌ ಸದಸ್ಯರು ರೇಷ್ಮೆ ಜಂಟಿ ನಿರ್ದೇಶಕ ಎಸ್‌.ವಿ.ಕುಮಾರ್‌ ಅವರಿಗೆ ಮನವಿಯನ್ನು ಸಲ್ಲಿಸಿದರು.
ಶಿಡ್ಲಘಟ್ಟ ಗಾಹೂ ತಾಲ್ಲೂಕಿನಲ್ಲಿ ಸಾವಿರಾರು ಮಂದಿ ರೇಷ್ಮೆ ಬಿಚ್ಚಾಣಿಕೆ ಕಸುಬನ್ನು ಅವಲಂಬಿಸಿದ್ದಾರೆ. ಬಹುತೇಕರು ಕುಟುಂಬ ಸಮೇತರಾಗಿ ಈ ಕಸುಬಿನಲ್ಲಿ ತೊಡಗಿಸಿಕೊಂಡಿರುತ್ತಾರೆ. ರೈತರಿಗೆ ಸಮಸ್ಯೆಗಳು ಬಂದಾಗ ಸರ್ಕಾರ ಬೆನ್ನೆಲುಬಾಗಿ ನಿಂತು ದರ ಕುಸಿದಾಗ ಪ್ರೋತ್ಸಾಹ ಧನವನ್ನು ನೀಡಿ ಕಾಪಾಡುತ್ತದೆ. ಆದರೆ ರೀಲರುಗಳಿಗೆ ಸಮಸ್ಯೆಗಳುಂಟಾದಾಗ ಸರ್ಕಾರದಿಂದ ಯಾವುದೇ ರೀತಿಯ ಬೆಂಬಲ ಸಿಗುತ್ತಿಲ್ಲ. ಹಿಂದಿನ ಸರ್ಕಾರದಲ್ಲಿ ರೀಲರುಗಳ ಕಚ್ಚಾ ರೇಷ್ಮೆಗೆ ಪ್ರೋತ್ಸಾಹಧನವನ್ನು ನಿರಂತರವಾಗಿ ನೀಡಲಾಗುತ್ತಿತ್ತು. ಆದರೆ 2017 ನೇ ಸಾಲಿನಿಂದ ಈ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ. ಸಂಬಂಧಪಟ್ಟವರ ಗಮನ ಸೆಳೆದು ಪ್ರೋತ್ಸಾಹಧನವನ್ನು ಮುಂದುವರೆಸಬೇಕು. ರೀಲರುಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ಸಿಲ್ಕ್‌ ಸಿಟಿ ರೀಲರ್ಸ್‌ ವೆಲ್‌ಫೇರ್‌ ಅಸೋಸಿಯೇಷನ್ಸ್‌ ಗೌರವಾಧ್ಯಕ್ಷ ಸೈಯದ್‌, ಅಕ್ರಂ ಅಹಮದ್‌, ಅಧ್ಯಕ್ಷ ಮಹಮ್ಮದ್‌ ಜಮೀರ್‌, ಉಪಾಧ್ಯಕ್ಷ ನವೀದ್‌ ಅಹಮದ್‌, ಫಕೃದ್ದೀನ್‌, ಶ್ರೀನಿವಾಸ್‌, ಶ್ರೀನಾಥ್‌, ರಹಮತ್ತುಲ್ಲ, ಶಬೀರ್‌ಪಾಷ, ಅಮೀರ್‌ಪಾಷ, ಅಸ್ಲಂಪಾಷ ಹಾಜರಿದ್ದರು.

error: Content is protected !!