Home News ‘ರೇಷ್ಮೆ ನಾಡು ಶಿಡ್ಲಘಟ್ಟ’ ಎಂಬ ನಾಮಫಲಕ ಅಳವಡಿಸಲು ಒತ್ತಾಯ

‘ರೇಷ್ಮೆ ನಾಡು ಶಿಡ್ಲಘಟ್ಟ’ ಎಂಬ ನಾಮಫಲಕ ಅಳವಡಿಸಲು ಒತ್ತಾಯ

0

ಶಿಡ್ಲಘಟ್ಟವನ್ನು ಪ್ರವೇಶಿಸುವಲ್ಲಿ ನಾಮಫಲಕವನ್ನು ಅಳವಡಿಸುವಂತೆ ಒತ್ತಾಯಿಸಿ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಸದಸ್ಯರು ಗುರುವಾರ ನಗರಸಭೆ ಆಯುಕ್ತ ಚಲಪತಿ ಅವರಿಗೆ ಮನವಿಯನ್ನು ಸಲ್ಲಿಸಿದರು.
ರೇಷ್ಮೆಗೆ ಪ್ರಸಿದ್ಧವಾದ ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬೇರೆ ಜಿಲ್ಲೆಗಳಿಂದ, ನೆರೆಯ ರಾಜ್ಯಗಳಿಂದೆಲ್ಲಾ ರೈತರು ರೇಷ್ಮೆ ಗೂಡನ್ನು ತರುತ್ತಾರೆ. ನಮ್ಮ ನಗರದ ಪ್ರವೇಶದಲ್ಲಿ ‘ರೇಷ್ಮೆ ನಾಡು ಶಿಡ್ಲಘಟ್ಟ’ ಎಂಬ ನಾಮಫಲಕವನ್ನು ಅಳವಡಿಸಿ. ನಮ್ಮ ನಗರದ ಹೆಮ್ಮೆಯ ಪ್ರತೀಕವಾಗುತ್ತದೆ. ಊರಿನ ಹೆಸರನ್ನು ಕೇಳಿಕೊಂಡು ಬರುವ ಪರಿಸ್ಥಿತಿ ಈಗ ಇದೆ ಅದನ್ನು ಹೋಗಲಾಡಿಸಿ ಎಂದು ಆಗ್ರಹಿಸಿ ಮನವಿಯನ್ನು ಸಲ್ಲಿಸಿದರು.
ನಗರಸಭೆ ಆಯುಕ್ತ ಚಲಪತಿ ಮಾತನಾಡಿ, ನಗರಸಭೆಯ ಸಭೆಯಲ್ಲಿ ಈ ವಿಷಯವನ್ನು ಚರ್ಚೆಗೆ ತಂದು ಅತಿ ಶೀಘ್ರದಲ್ಲಿ ನಾಮಫಲಕ ಅಳವಡಿಸುವುದಾಗಿ ಭರವಸೆ ನೀಡಿದರು.
ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೆ.ನರೇಶ್‌ಕುಮಾರ್‌, ನಗರಾಧ್ಯಕ್ಷ ಮಧುಕುಮಾರ್‌, ತಾಲ್ಲೂಕು ಅಧ್ಯಕ್ಷ ಎಂ.ಬಿ.ಬೈರಾರೆಡ್ಡಿ, ನಾಗರಾಜ್‌, ಗಣೇಶ್‌, ಚಂದ್ರ, ಸತೀಶ್‌ ಹಾಜರಿದ್ದರು.

error: Content is protected !!