Home News ವಾಗ್ಗೇಯಕಾರರ ಆರಾಧನಾ ಮಹೋತ್ಸವ

ವಾಗ್ಗೇಯಕಾರರ ಆರಾಧನಾ ಮಹೋತ್ಸವ

0

ನಗರದ ಕಾಳಿಕಾಂಬ ಕಮಠೇಶ್ವರಸ್ವಾಮಿ ದೇವಾಲಯದ ಸಮುದಾಯ ಭವನದಲ್ಲಿ ಭಾನುವಾರ ಮಾರುತಿ ಸಂಗೀತ ಅಕಾಡೆಮಿಯಿಂದ ಪುರಂದರದಾಸರು, ತ್ಯಾಗರಾಜಸ್ವಾಮಿ, ಕನಕದಾಸರು, ಯೋಗಿ ನಾರೇಯಣ ಯತೀಂದ್ರರು ಹಾಗೂ ವಾಗ್ಗೇಯಕಾರರ ಆರಾಧನಾ ಮಹೋತ್ಸವವನ್ನು ದಿನಪೂರ್ತಿ ಆಚರಿಸಲಾಯಿತು.
ಬೆಳಿಗ್ಗೆ ದೇವರ ಪೂಜೆಯೊಂದಿಗೆ ಪ್ರಾರಂಭಗೊಂಡು, ನಾದಸ್ವರ ಕಚೇರಿ, ಮಾರುತಿ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿಂದ ಪಕ್ಕವಾದ್ಯಗಳೊಂದಿಗೆ ಗಾಯನ, ಪಂಚರತ್ನ ಕೀರ್ತನೆಗಳ ಗೋಷ್ಠಿ ಗಾಯನ ಹಾಗೂ ವಿಶೇಷ ಸಂಗೀತ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಕಲಾವಿದರಾದ ಶಾಂತ ಕೃಷ್ಣಮೂರ್ತಿ, ಸವಿತಾ ಸುಬ್ರಹ್ಮಣ್ಯಂ, ಆರ್‌.ಜಗದೀಶ್‌ಕುಮಾರ್‌, ಮಂಜುಳಾ ಜಗದೀಶ್‌, ಪಾರ್ವತಮ್ಮ ಬಸವರಾಜ್‌, ಭಾಗ್ಯಲಕ್ಷ್ಮಿ ಅಯ್ಯರ್‌, ಭಾರತಿ, ಡಾ.ಡಿ.ಟಿ.ಸತ್ಯನಾರಾಯಣರಾವ್‌, ಬಸಪ್ಪ, ರಾಮಚಂದ್ರಪ್ಪ, ಗಂಗಾಧರಪ್ಪ, ಮರಿಯಪ್ಪ, ನಾಮದೇವ್‌, ಜಿ.ಎನ್‌.ಶ್ಯಾಮಸುಂದರ್‌ ಮತ್ತಿತರರು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!