Home News ಶಾಲೆಯ ಅಭಿವೃದ್ಧಿಯತ್ತ ಪೋಷಕರೂ ಸಹಕರಿಸಬೇಕು

ಶಾಲೆಯ ಅಭಿವೃದ್ಧಿಯತ್ತ ಪೋಷಕರೂ ಸಹಕರಿಸಬೇಕು

0

ಮಕ್ಕಳನ್ನು ಶಾಲೆಗೆ ಕಳಿಸಿದರಷ್ಟೇ ಸಾಲದು. ಶಾಲೆಯ ಅಭಿವೃದ್ಧಿಯತ್ತ ಪೋಷಕರೂ ಸಹಕರಿಸಬೇಕು. ಆಗ ಮಾತ್ರ ಸರ್ಕಾರಿ ಶಾಲೆಗಳು ಗಟ್ಟಿಗೊಳ್ಳುತ್ತವೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ತಿಳಿಸಿದರು.
ತಾಲ್ಲೂಕಿನ ಚೀಮಂಗಲದ ಕುವೆಂಪು ಶತಮಾನೋತ್ಸವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ತಾಯಂದಿರ ಸಂಭ್ರಮದ ಆಟ ಹಾಗೂ ಶ್ರೀ ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೋಷಕರು ಶಾಲೆಯ ಚಟುವಟಿಕೆಗಳಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ತಾಯಂದಿರ ಸಂಭ್ರಮದ ಆಟವನ್ನು ಆಯೋಜಿರುವುದು ಸಮಂಜಸವಾಗಿದೆ. ಮಕ್ಕಳಂತೆ ಹಿರಿಯರು ಆಡಿ ನಲಿದು ತಮ್ಮ ಬಾಲ್ಯಕ್ಕೆ ಮರಳುವುದಲ್ಲದೆ ತಮ್ಮ ಮಕ್ಕಳು ಓದುವ ಶಾಲೆಯ ಬಗ್ಗೆಯೂ ಆಸಕ್ತಿ ವಹಿಸುವಂತಾಗಲಿ ಎಂದು ಹೇಳಿದರು.

ಚೀಮಂಗಲದ ಕುವೆಂಪು ಶತಮಾನೋತ್ಸವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಯಂದಿರ ಸಂಭ್ರಮದ ಆಟ ನಡೆಸಲಾಯಿತು

ಕ್ಷೇತ್ರ ಶಿಕ್ಷಣಾಧಿಕಾರಿ ಎ.ಚಂದ್ರಶೇಖರಬಾಬು ಮಾತನಾಡಿ, ಬಹುತೇಕ ತಾಯಂದಿರು ಅಡುಗೆಮನೆ ಹಾಗೂ ರೈತ ಕಸುಬುಗಳಲ್ಲಿ ತೊಡಗಿರುವವರು ಆಗಿರುತ್ತಾರೆ. ಅವರಿಗೆ ಆಟಗಳನ್ನು ಆಡಿಸುವ ಮೂಲಕ ಅವರಲ್ಲಿ ಉತ್ಸಾಹ, ಹುಮ್ಮಸ್ಸು, ಚೈತನ್ಯ ತುಂಬಲಾಗುತ್ತಿದೆ. ದೈನಂದಿನ ಚಟುವಟಿಕೆಗಳಿಗೆ ಹೊರತಾಗಿ ಈ ರೀತಿ ಶಾಲೆಯ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಮಕ್ಕಳು ಮತ್ತು ಪೋಷಕರ ಬಾಂಧವ್ಯವೂ ಹೆಚ್ಚಾಗುತ್ತದೆ. ಪರೀಕ್ಷೆಗೆ ಮುನ್ನ ಶಾರದೆಯ ಪೂಜೆ ಮಾಡುವ ಜೊತೆಯಲ್ಲಿ ಮಕ್ಕಳ ಪಾಲಿಗೆ ದೇವರಾದ ತಾಯಂದಿರಿಗೂ ಶಾಲೆಗೆ ಕರೆಸಿರುವುದು ಸೂಕ್ತವಾಗಿದೆ ಎಂದು ಹೇಳಿದರು.
ತಾಯಂದಿರಿಗೆ ಮ್ಯೂಸಿಕಲ್‌ ಚೇರ್‌, ಪಾಸಿಂಗ್‌ ದಿ ಬಾಲ್‌, ಗುಂಡು ಎಸೆತ, ಬೆಲೂನ್‌ ಹೊಡೆಯುವುದು, ಲೆಮೆನ್‌ ಅಂಡ್‌ ಸ್ಪೂನ್‌, ಮಡಿಕೆ ಹೊಡೆಯುವುದು, ಬಕೇಟ್‌ ಬಾಲ್‌, ಹಗ್ಗ ಜಗ್ಗಾಟ ಆಟಗಳನ್ನು ಆಡಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಳಿನಾ ಮಂಜುನಾಥ್‌, ಉಪಾಧ್ಯಕ್ಷ ಸಿ.ಎಂ.ನಾರಾಯಣಸ್ವಾಮಿ, ಸದಸ್ಯರಾದ ಸೌಮ್ಯ ಮಂಜುನಾಥ್‌, ಸುಮ ಮಂಜುನಾಥ್‌, ಎಸ್‌ಡಿಎಂಸಿ ಉಪಾಧ್ಯಕ್ಷೆ ಮಾದವಮ್ಮ, ಸದಸ್ಯ ಮೋಹನ್‌, ಉಮೇಶ್‌, ಮುನಿಕೃಷ್ಣ, ನಾಗರಾಜ್‌, ಮಂಜುನಾಥ್‌, ಕೃಷ್ಣಮೂರ್ತಿ, ಆಂಜನೇಯರೆಡ್ಡಿ, ಶಶಿಕಲಾ, ಅರುಣಾ, ನಾರಾಯಣಸ್ವಾಮಿ, ಮುಖ್ಯ ಶಿಕ್ಷಕ ಸಿ.ಎಂ.ಮುನಿರಾಜು, ಶಿಕ್ಷಕರಾದ ವಿಠಲ್‌, ಮಂಜುನಾಥ, ಲೋಕೇಶ್‌, ಪಿಡಿಒ ಹರೀಶ್‌ ಕುಮಾರ್‌ ಹಾಜರಿದ್ದರು.

error: Content is protected !!