Home News ಶ್ರೀ ಶಂಕರಮಠದಲ್ಲಿ ಶ್ರೀ ಶಂಕರಾಚಾರ್ಯರಿಗೆ ವಿಶೇಷ ಪೂಜೆ

ಶ್ರೀ ಶಂಕರಮಠದಲ್ಲಿ ಶ್ರೀ ಶಂಕರಾಚಾರ್ಯರಿಗೆ ವಿಶೇಷ ಪೂಜೆ

0

ನಗರದ ಶ್ರೀ ಶಂಕರಮಠದಲ್ಲಿ ಶುಕ್ರವಾರ ದ್ವಾದಶಿಯಂದು ಶ್ರೀ ಶಂಕರಾಚಾರ್ಯರಿಗೆ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು.
ವಿಶೇಷ ಪೂಜೆಯ ಪ್ರಯುಕ್ತ ಆದಿಗುರು ಶ್ರೀ ಶಂಕರಾಚಾರ್ಯರು ಮತ್ತು ಶ್ರೀ ಭಾರತಿ ತೀರ್ಥ ಸ್ವಾಮಿಗಳು ರಚಿಸಿದ ವಿವಿಧ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ಶೃಂಗೇರಿ ಸಹೋದರಿಯರಾದ ಮೀನಾಕ್ಷಿ ಮತ್ತು ಭಾರತಿ ರವರಿಂದ ನಡೆಯಿತು. ಪಿಟೀಲು ಜಿ.ಎನ್. ಶ್ಯಾಮ್ ಸುಂದರ್ ಮತ್ತು ಮೃದಂಗ ಕೈವಾರ ರಾಮ್ ಪ್ರಸಾದ್ ನುಡಿಸಿದರು.
ಪೂಜಾ ಕಾರ್ಯಕ್ರಮದ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀ ಶಂಕರ ಸೇವಾ ಟ್ರಸ್ಟ್ ಸದಸ್ಯರು, ತಾಲ್ಲೂಕು ಬ್ರಾಹ್ಮಣ ಸಂಘದ ಪದಾಧಿಕಾರಿಗಳು, ಗಾಯತ್ರಿ ಮಹಿಳಾ ಮಂಡಳಿ ಸದಸ್ಯರು ಮತ್ತು ವಿಪ್ರ ಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್‌ನ ಸದಸ್ಯರು ಭಾಗವಹಿಸಿದ್ದರು.

error: Content is protected !!