Home News ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಮತ್ತು ಯುವಕರಿಗೆ ಕ್ರೀಡಾ ಸಲಕರಣೆಗಳ ವಿತರಣೆ

ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಮತ್ತು ಯುವಕರಿಗೆ ಕ್ರೀಡಾ ಸಲಕರಣೆಗಳ ವಿತರಣೆ

0

ತಾಲ್ಲೂಕಿನ ಜಯಂತಿ ಗ್ರಾಮದ ಭಗತ್ ಸಿಂಗ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಮತ್ತು ಜಯಂತಿಗ್ರಾಮ ಯುವಕರಿಗೆ ಸುಮಾರು 40 ಸಾವಿರ ಬೆಲೆಯ ಕ್ರೀಡಾ ಸಾಮಾಗ್ರಿಗಳನ್ನು ಮಂಗಳವಾರ ವಿತರಿಸಲಾಯಿತು.
ವಾಲಿಬಾಲ್, ಪೋಲ್ ಸೆಟ್, ನೆಟ್, ಫುಟ್ಬಾಲ್ ಸೀನಿಯರ್, ಕ್ರಿಕೆಟ್ ಸೆಟ್, ಥ್ರೋಬಾಲ್, ಸ್ಪೋರ್ಟ್ಸ್ ಕಿಟ್ ಬ್ಯಾಗ್, ಟೆನಿಕಾಟ್ ರಿಂಗ್, ಷಟಲ್ ರಾಕೆಟ್, ಷಟಲ್ ಕಾಕ್ ಬಾಕ್ಸ್ ಮುಂತಾದವುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಭಗತ್ ಸಿಂಗ್ ಅಸೋಸಿಯೇಷನ್‌ನ ಅಧ್ಯಕ್ಷ ಎಂ.ದೇವರಾಜ್, ಕಾರ್ಯದರ್ಶಿ ಜಯಂತಿಗ್ರಾಮ ನಾರಾಯಣಸ್ವಾಮಿ, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜೀವಿಂದರ್ ಕುಮಾರ್, ದೈಹಿಕ ಶಿಕ್ಷಕಿ ಮಂಜುಳ, ಶಿಕ್ಷಕರಾದ ರಾಧಾಕೃಷ್ಣ, ಶಿವಕುಮಾರ ಸ್ವಾಮಿ, ಮಾಲತೇಶ್ ಹಳ್ಳೇರ್, ಗಾಯಿತ್ರಿ, ಗ್ರಾಮಸ್ಥರಾದ ಮೈಲಾರಿ, ಕೋಟಹಳ್ಳಿ ಅರುಣ್ ಕುಮಾರ್ ಹಾಜರಿದ್ದರು.

error: Content is protected !!