Home News ಸಾರ್ವಜನಿಕರಿಂದ ನೇರವಾಗಿ ಗರ್ಭಗುಡಿ ಪ್ರವೇಶ ಮತ್ತು ಸ್ವಹಸ್ತಗಳಿಂದ ಮುತ್ತಿನ ಅಭಿಷೇಕ

ಸಾರ್ವಜನಿಕರಿಂದ ನೇರವಾಗಿ ಗರ್ಭಗುಡಿ ಪ್ರವೇಶ ಮತ್ತು ಸ್ವಹಸ್ತಗಳಿಂದ ಮುತ್ತಿನ ಅಭಿಷೇಕ

0

ಭಾರತೀಯ ಸಂಸ್ಕೃತಿ ವೈವಿಧ್ಯಮಯವಾಗಿದೆ. ಅನೇಕತೆಯಲ್ಲಿ ಏಕತೆ ಕಾಣುವ ದೇಶ ನಮ್ಮದು, ಎಂದು ಸಾಯಿನಾಥ ಜ್ಞಾನಮಂದಿರದ ಧರ್ಮದರ್ಶಿ ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನಮಂದಿರದಲ್ಲಿ ಮಂಗಳವಾರ ದಸರಾ ಹಬ್ಬ ಹಾಗೂ ಸಾಯಿಬಾಬಾ ದೇಹತ್ಯಾಗ ಮಾಡಿದ ದಿನದ ಅಂಗವಾಗಿ ಸಾರ್ವಜನಿಕರಿಂದ ನೇರವಾಗಿ ಗರ್ಭಗುಡಿ ಪ್ರವೇಶ ಮತ್ತು ಸ್ವಹಸ್ತಗಳಿಂದ ಮುತ್ತಿನ ಅಭಿಷೇಕ ಮುಂತಾದ ಸಾಂಸೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಯಿಬಾಬಾರವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಠ ಮಂದಿರಗಳು ಸರ್ವ ಧರ್ಮಗಳ ಶಾಂತಿ ಕೇಂದ್ರಗಳಾಗಬೇಕು. ರಾಗ ದ್ವೇಷಗಳನ್ನು ಹರಡುವ ಕೆಲಸ ಮಾಡಬಾರದೆಂದರು.
ಈ ಸಂದರ್ಭದಲ್ಲಿ ಶಿರಡಿಯಿಂದ ತಂದಿದ್ದ ಸಾಯಿನಾಥರ ನಿಜ ಪಾದುಕೆಗಳ ದರ್ಶನ ಮತ್ತು ಸ್ವರ್ಶ ಏರ್ಪಡಿಸಲಾಗಿತ್ತು. ಬೆಂಗಳೂರು ನಗರದ ಸಾಯಿನಾಥ ಇಂಟರ್‌ನ್ಯಾಷನಲ್ ಫೌಂಡೇಶನ್ ಅವರಿಂದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಇದಕ್ಕೂ ಮುನ್ನ ಮಂಗಳವಾರ ಮುಂಜಾನೆ ಶಾಂತಿ ಸೌರ್ಹಾದತೆಗಾಗಿ, ಶ್ರೀ ದುರ್ಗಾ ಹೋಮವನ್ನು ಏರ್ಪಡಿಸಿ ಪೂರ್ಣಾಹುತಿಯನ್ನು ನೀಡಲಾಯಿತು.
ಶಿರಡಿಯಿಂದ ಆಗಮಿಸಿದ ಪಂಡಿತ್ ಅಜಯ್ ದಾಸ್, ಸಾಯಿಬಾಬಾ ಫೌಂಡೇಶನ್‌ನ ಮಂಜುನಾಥ್, ಸಾಯಿಸಾಗರ್, ಎಚ್,ವಿ ರಾಮಕೃಷ್ಣಪ್ಪ, ಮೇಲೂರಿನ ರಮೇಶ್, ಸೀತಾರಾಮರೆಡ್ಡಿ ಬಾಬು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.