Home News ಸ್ಕೇಟಿಂಗ್‌ ವಿದ್ಯಾರ್ಥಿಗಳಿಂದ ಮತದಾನದ ಮಹತ್ವದ ಅರಿವು

ಸ್ಕೇಟಿಂಗ್‌ ವಿದ್ಯಾರ್ಥಿಗಳಿಂದ ಮತದಾನದ ಮಹತ್ವದ ಅರಿವು

0

ಜಿಲ್ಲಾ ಪಂಚಾಯಿತಿಯ ಸಹಕಾರದೊಂದಿಗೆ ನಡೆದ ಈ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಕರ್ನಾಟಕ ರೂರಲ್‌ ಸ್ಕೇಟಿಂಗ್‌ ಅಸೋಸಿಯೇಶನ್‌ ಶಿಡ್ಲಘಟ್ಟ ಶಾಖೆಯ 16 ವಿದ್ಯಾರ್ಥಿಗಳು ಶಿಡ್ಲಘಟ್ಟದಿಂದ ಚಿಕ್ಕಬಳ್ಳಾಪುರಕ್ಕೆ ಶನಿವಾರ ಸ್ಕೇಟಿಂಗ್‌ ಮಾಡುತ್ತಾ ಮತದಾನದ ಅರಿವು ಮೂಡಿಸುತ್ತಾ ಸಾಗಿದರು. ಮಕ್ಕಳ ಬೆಂಗಾವಲಾಗಿ ಆಂಬ್ಯುಲೆನ್ಸ್‌, ಪೊಲೀಸರು ಮತ್ತು ವಾರ್ತಾ ಇಲಾಖೆಯ ಬಸ್‌ ಸಾಗಿತ್ತು.
ಚಿಕ್ಕಬಳ್ಳಾಪುರದವರೆಗೂ ಸ್ಕೇಟಿಂಗ್‌ ಮಾಡಿ ಪ್ರಥಮ ಸ್ಥಾನ ಪಡೆದ ಟಿ.ಎನ್‌.ಹೇಮಂತ್‌, ದ್ವಿತೀಯ ಸ್ಥಾನ ಪಡೆದ ಎಚ್‌.ಗೋಕಲ್‌ಗೌಡ ಮತ್ತು ತೃತೀಯಸ್ಥಾನ ಪಡೆದ ಎಂ.ಎಂ.ಸ್ಕಂದನ್‌ ಅವರಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗುರುದತ್‌, ಆಯುಕ್ತ ಉಮಾಕಾಂತ್‌ ಮತ್ತು ಕ್ರೀಡಾ ಇಲಾಖೆಯ ರುದ್ರಪ್ಪ ಪ್ರಶಸ್ತಿ ಪತ್ರವನ್ನು ನೀಡಿದರು. ಭಾಗವಹಿಸಿದ ಎಲ್ಲರಿಗೂ ಸಮಾಧಾನಕರ ಪ್ರಮಾಣ ಪತ್ರವನ್ನು ನೀಡಿದರು.
ಸ್ಕೇಟಿಂಗ್‌ ವಿದ್ಯಾರ್ಥಿಗಳಾದ ಸುಮನೋಹರ್‌, ಧೃವಕುಮಾರ್‌, ಗೋಕುಲ್‌, ಚೈತ್ರ, ಗೌರವ್‌, ಮೊಯಿನ್‌, ಪ್ರಿಯತಮ್‌ ಯಾದವ್‌, ದ್ರೋಣ, ಭುವನ್‌, ಭೂಮಿಕ, ಮಾನಿಷ್‌, ಶಿವಚರಣ್‌, ಚಿನ್ಮಯಿ, ಪಾವನಿ, ಭೂವನ, ಪಾವನಿ ಭಾಗವಹಿಸಿದ್ದರು.
ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಟಿ.ಟಿ.ನರಸಿಂಹಪ್ಪ ಮಾತನಾಡಿ, ‘ಪೋಷಕರು ತಮ್ಮ ದ್ವಿಚಕ್ರ ವಾಹನಗಳಲ್ಲಿ ಸ್ಕೇಟಿಂಗ್‌ ಮಾಡಿಕೊಂಡು ಹೋಗುತ್ತಿದ್ದ ಮಕ್ಕಳ ಬೆಂಗಾವಲಾಗಿ ಹುರಿದುಂಬಿಸುತ್ತಾ ಸಾಗಿದರು. ಚಿಕ್ಕಬಳ್ಳಾಪುರದವರೆಗೂ ಮಕ್ಕಳು ದಾರಿಯುದ್ದಕ್ಕೂ ಸಿಗುವ ಹಳ್ಳಿಗಳಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದರು. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮಕ್ಕಳು ಸ್ಕೇಟಿಂಗ್‌ ಮಾಡಿದರು’ ಎಂದು ಹೇಳಿದರು.
ಡಾ.ಡಿ.ಟಿ.ಸತ್ಯನಾರಾಯರಾವ್‌, ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಿರಂಜನ್‌, ತಾಲ್ಲೂಕು ಪಂಚಾಯಿತಿ ಸದಸ್ಯೆ ಪಂಕಜಾ ನಿರಂಜನ್‌, ಮುರಳಿ, ಛಾಯಾ ರಮೇಶ್‌, ಹರೀಶ್‌, ಲಕ್ಷ್ಮಣ್‌, ಶ್ರೀನಿವಾಸ್‌, ಶಿವಪ್ಪ, ಲೋಕೇಶ್‌, ಮಂಜುನಾಥ್‌, ಜೆ.ವಿ.ಸುರೇಶ್‌ ಹಾಜರಿದ್ದರು.

error: Content is protected !!