Home News ಸ್ತ್ರೀಶಕ್ತಿ ಭವನದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಸ್ತ್ರೀಶಕ್ತಿ ಭವನದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

0

ನಗರದ ಸ್ತ್ರೀಶಕ್ತಿ ಭವನದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಎಂ.ರಾಜಣ್ಣ ಮಾತನಾಡಿ, ಇಂದು ದೇಶದ ಪ್ರಗತಿಯ ಪಥದೆಡೆಗೆ ಸಾಗಲು ಮಹಿಳೆಯರೂ ಕೂಡ ಪುರುಷರಿಗೆ ಸಮಾನವಾಗಿ ಸಾಗಬೇಕಾಗಿದೆ. ಮಹಿಳಾ ದಿನಾಚರಣೆಯು ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳ ಸಾಧನೆಯನ್ನು ಸಂಕೇತಿಸುವ ದಿನವಾಗಿದೆ ಎಂದು ತಿಳಿಸಿದರು.
ತಾಯಿಯ ಸ್ಥಾನವನ್ನು ತುಂಬುವ ಮಹಿಳೆಯ ಹೊಣೆಗಾರಿಕೆ ಮಹತ್ತರವಾದದ್ದು. ಸಾಮಾಜಿಕ ಬದಲಾವಣೆಗಳಲ್ಲಿ ಮಹಿಳೆಯ ಪಾತ್ರ ಗಮನಾರ್ಹವಾಗಿದೆ. ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಪ್ರಯತ್ನಿಸಿ ಸಫಲರಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು ಮಾತನಾಡಿ, ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು. ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ವಿದ್ಯೆ, ಸ್ವಶಸಕ್ತಿ, ಆರ್ಥಿಕ ಭದ್ರತೆಯಿದ್ದರೆ ಹೆಣ್ಣು ಕುಟುಂಬಕ್ಕೆ, ಸಮಾಜಕ್ಕೆ ಬೆಳಕನ್ನು ನೀಡಬಲ್ಲಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಐನಾ ಟ್ರಸ್ಟ್‌ ವಿದ್ಯಾರ್ಥಿಗಳು ಪೂಜಾ ಕುಣಿತ ಹಾಗೂ ಇತರೆ ಜನಪದ ವೇಷಭೂಷಣಗಳೊಂದಿಗೆ ನೃತ್ಯ ಪ್ರದರ್ಶಿಸಿದರು. ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು.
ನಗರಸಭಾ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್‌, ತಾಲ್ಲೂಕು ಪಂಚಾಯಿತಿ ಸದಸ್ಯೆ ಚಂದ್ರಕಲಾ, ಸ್ವಿಟ್ಜರ್‌ಲೆಂಡ್‌ನ ರುಬೆಟಾ, ಐನಾ ಟ್ರಸ್ಟ್‌ನ ವೆರೋನಿಕಾ ಡೇವಿಡ್‌, ಮೇರಿ ಚಲ್ಲಾಬೆರೆ, ಡಾ.ವಿಜಯಾ ವೆಂಕಟರಾಮ್‌, ಭಾರತಿ ಆಂಜನೇಯರೆಡ್ಡಿ, ಸೌಮ್ಯ, ಗೌರಮ್ಮ ಹಾಜರಿದ್ದರು.

error: Content is protected !!