ಹುಟ್ಟೂರು, ಗುರುಗಳನ್ನು ಮರೆಯಬಾರದು: ಮಂಗಳನಾಥ ಸ್ವಾಮೀಜಿ

Sidlaghatta : ವ್ಯಕ್ತಿ ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ತಾನು ಹುಟ್ಟಿದ ಊರು, ಅಕ್ಷರ ಕಲಿಸಿದ ಗುರುಗಳು ಹಾಗೂ ತನ್ನನ್ನು ಬೆಳೆಸಿದ ಜನರನ್ನು ಮರೆಯಬಾರದು. ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಮರಳಿ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಠದ ಮಂಗಳನಾಥ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ವೈ. ಹುಣಸೇನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿ, ಧರ್ಮ, ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರೊಂದಿಗೆ ಬೆರೆತು, ಅಗತ್ಯವಿರುವವರಿಗೆ ನೆರವಾಗುವವರು ಸಮಾಜದಲ್ಲಿ ಮಾದರಿಯಾಗುತ್ತಾರೆ. ಸೀಕಲ್ ರಾಮಚಂದ್ರಗೌಡ ಅವರು ಹುಟ್ಟೂರಿನ ಜನರೊಂದಿಗೆ ಸಂಪರ್ಕ ಇಟ್ಟುಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಹಲವು ಭಾಗಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕೀಟಬಾಧೆಯಿಂದ ಬೆಳೆಗಳ ಇಳುವರಿಯೂ ಕಡಿಮೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿ, ಕೃಷಿಗೆ ಅಗತ್ಯ ನೆರವು ಒದಗಿಸಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ಒತ್ತಾಯಿಸಿದರು.
ಯುವಕರು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುವುದು ಅಪಾಯಕಾರಿ. ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿರುತ್ತಾರೆ. ಇದನ್ನು ಅರಿತು ವಾಹನ ಸವಾರರು ಹೆಲ್ಮೆಟ್ ಧರಿಸಿ, ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಅವರು ಮನವಿ ಮಾಡಿದರು.
ಸೀಕಲ್ ರಾಮಚಂದ್ರಗೌಡ ಅವರ ಜನ್ಮದಿನದ ಅಂಗವಾಗಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ದೇವರಮಳ್ಳೂರು ಗ್ರಾಮದಲ್ಲಿ ಕುಂಭದೊಂದಿಗೆ ಸ್ವಾಗತಿಸಿ ಮೆರವಣಿಗೆ ನಡೆಸಲಾಯಿತು. ಆತ್ಮರಾಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕೇಕ್ ಕತ್ತರಿಸಲಾಯಿತು.
ವೈ. ಹುಣಸೇನಹಳ್ಳಿಯಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ, ಆಟಗಾರರಿಗೆ ಕ್ರಿಕೆಟ್ ಪರಿಕರಗಳ ಕಿಟ್ ಹಾಗೂ ಹೆಲ್ಮೆಟ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸೀಕಲ್ ಆನಂದಗೌಡ, ಕಂಬದಹಳ್ಳಿ ಸುರೇಂದ್ರಗೌಡ, ಡಾ. ಸತ್ಯನಾರಾಯಣರಾವ್, ಬಿ.ಸಿ. ನಂದೀಶ್, ವೈ. ಹುಣಸೇನಹಳ್ಳಿ ದೇವರಾಜ್, ಮಳ್ಳೂರಯ್ಯ, ಕೊತ್ತನೂರು ಜಗದೀಶ್, ರವಿ, ಮಂಜುನಾಥರೆಡ್ಡಿ, ಪುರುಷೋತ್ತಮ್, ಬಂಗಾರು ರಾಮಕೃಷ್ಣಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸಂಬಂಧಿತ ಸುದ್ದಿ: ಪದವೀಧರ ಕ್ಷೇತ್ರದ ಗೆಲುವು: NDA ಸಂಭ್ರಮಾಚರಣೆ, ಮುಂದಿನ ಚುನಾವಣೆಗಳಲ್ಲಿ BJP–JDS ಮೈತ್ರಿ
For Daily Updates WhatsApp ‘HI’ to 7406303366
Summary in English
Speaking at Y. Hunasenahalli, Adichunchanagiri Math’s Mangalanatha Swamiji said a person, however high he rises, should not forget his birthplace, his teachers and the people who raised him. BJP district president Seekal Ramachandra Gowda, whose birthday was marked by fans and party workers, urged the government to help farmers as groundwater falls and pests cut yields, and asked riders to wear helmets. He started a cricket tournament and gave players cricket kits and helmets.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news