ಶಿಡ್ಲಘಟ್ಟ ತಾಲ್ಲೂಕಿನ ಸುಗಟುರು ಗ್ರಾಮದಲ್ಲಿ ಎಬಿಡಿ ಗ್ರೂಪ್ಸ್ ವತಿಯಿಂದ ಮನೆಮನೆಗೂ ದಿನಸಿ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ABD Groups ಅಧ್ಯಕ್ಷ ರಾಜೀವ್ ಗೌಡ ಮಾತನಾಡಿದರು.
ಕೊರೊನಾ ಸಂಕಷ್ಟದಿಂದ ಇರುವವರಿಗೆ ಎಬಿಡಿ ಗ್ರೂಪ್ಸ್ ವತಿಯಿಂದ ತುರ್ತು ಅಂಬುಲೆನ್ಸ್ ಸೇವೆಯನ್ನು ಒದಗಿಸುವುದಾಗಿ ಅವರು ಹೇಳಿದರು.
ಸಮಾಜ ಸೇವೆಯೇ ನಮ್ಮ ಉದ್ದೇಶ ಹೊರತು ರಾಜಕೀಯದ ಆಕಾಂಕ್ಷೆಗಳಿಲ್ಲ. ತಾಲೂಕಿನಲ್ಲಿ ಆಂಬುಲೆನ್ಸ್ ಕೊರತೆಯಿದೆ ಎಂದು ನನ್ನ ಗಮನಕ್ಕೆ ಬಂದಿದೆ. ಇದನ್ನು ನಾನು ಗಂಭೀರವಾಗಿ ಪರಿಗಣಿಸಿ ಹತ್ತು ಆಂಬುಲೆನ್ಸ್ ಗಳನ್ನು ಶೀಘ್ರದಲ್ಲೆ ಜನರ ಸೇವೆಗಾಗಿ ಕೊಡುಗೆ ನೀಡುವುದಾಗಿ ಹೇಳಿದರು.
ಅನಾರೋಗ್ಯದಿಂದ ಬಳಲುತ್ತಿರುವವರು ಯಾವುದೇ ರೀತಿಯ ಸಹಾಯ ಕೇಳಿದರೂ ಅವರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ. ಆಸ್ಪತ್ರೆ ಖರ್ಚು ಹಾಗೂ ಬೇರೆ ಯಾವುದೇ ಸಹಾಯವಾಗಲಿ ನೆರವಾಗುತ್ತವೆ ಎಂದರು.
ತಾಲೂಕಿನಾದ್ಯಂತ ಯಾವುದೇ ಗ್ರಾಮದಲ್ಲಿ ಆಗಲಿ ದೇವಸ್ಥಾನಗಳನ್ನು ಕಟ್ಟಬೇಕಾದರೆ ಅವರಿಗೆ ಸಹಾಯ ಕೇಳಿದಲ್ಲಿ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ. ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಎಲ್ಲರಿಗೂ ಕೋವಿಡ್ ಸಂಕಷ್ಟದಲ್ಲಿ ಕೈಲಾದ ಸಹಾಯ ಹಸ್ತ ಚಾಚುತ್ತಿದ್ದೇವೆ. ಜನತೆಗೆ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳುವಂತೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಕಾಯಿಲೆಯಿಂದ ಬಳಲುತ್ತಿರುವ ಕುಟುಂಬಕ್ಕೆ ಹಾಗೂ ಅಂಗವಿಕಲ ವ್ಯಕ್ತಿಗೆ ತಲಾ ಹತ್ತು ಸಾವಿರ ರೂಗಳನ್ನು ಸಹಾಯವಾಗಿ ನೀಡಿದರು.
ಈ ಸಂದರ್ಭದಲ್ಲಿ ಧನುಶ್, ಮುನಿರಾಜು ಕುಟ್ಟಿ, ಹರೀಶ್, ಸುಗಟುರು ಗ್ರಾಮದ ಪ್ರಕಾಶ್, ಅಂಬರೀಶ್, ಶ್ರೀನಿವಾಸ್ ಬಾಬು, ಗ್ರಾಮ ಪಂಚಾಯಿತಿ ಸದಸ್ಯ ಶಂಕರ್, ಗ್ರಾಮಸ್ಥರಾದ ಚಂದ್ರಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾಂತಮ್ಮ ದೇವರಾಜು, ದೊಡ್ಡ ಮುನಿವೆಂಕಟ ಶೆಟ್ಟಿ, ಚಿಕ್ಕ ಮುನಿವೆಂಕಟಶೆಟ್ಟಿ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi