Home News ತಮಟೆ ಕಲಾವಿದರಿಗೆ ಸರ್ಕಾರದಿಂದ ಸೌಲಭ್ಯ ಒದಗಿಸಿ

ತಮಟೆ ಕಲಾವಿದರಿಗೆ ಸರ್ಕಾರದಿಂದ ಸೌಲಭ್ಯ ಒದಗಿಸಿ

0

ನಗರದ ಪೂಜಮ್ಮದೇವಿ ಸಮುದಾಯ ಭವನದಲ್ಲಿ ಭಾನುವಾರ ನಡೆದ ಶಿಡ್ಲಘಟ್ಟ ತಾಲ್ಲೂಕು ತಮಟೆ ಕಲಾವಿದರ ನೂತನ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯ ತಮಟೆ ಕಲಾವಿದರ ಒಕ್ಕೂಟದ ಅಧ್ಯಕ್ಷ ಆರ್.ರವಿಶಂಕರ್ ಮಾತನಾಡಿದರು.

 ತಮಿಳುನಾಡು ಮಾದರಿಯಲ್ಲಿ ರಾಜ್ಯದ ತಮಟೆ ಕಲಾವಿದರಿಗೂ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

 ನೆರೆಯ ತಮಿಳುನಾಡಿನಲ್ಲಿ ತಮಟೆ ಕಲಾವಿದರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಜೊತೆಗೆ ಕಾರ್ಯಕ್ರಮಗಳನ್ನು ನೆರವೇರಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ರೈಲು ಮತ್ತು ಬಸ್ಸಿನಲ್ಲಿ ಸಂಚರಿಸಲು ಉಚಿತವಾಗಿ ಟಿಕೇಟ್ ಸೌಲಭ್ಯ ಕಲ್ಪಿಸಲಾಗಿದೆ. 35 ವರ್ಷ ಅನುಭವ ಹೊಂದಿರುವ ಕಲಾವಿದನ ಬಳಿ ಸೇವೆ ಸಲ್ಲಿಸುವ 10 ಮಂದಿ ಕಲಾವಿದರಿಗೆ ಪ್ರತಿ ಆರು ತಿಂಗಳೊಮ್ಮ ಸಮವಸ್ತ್ರ ಖರೀದಿಸಲು 30 ಸಾವಿರ ರೂಗಳ ಆರ್ಥಿಕ ನೆರವು ನೀಡಲಾಗುತ್ತದೆ. ಅದರಲ್ಲದೆ ಅವರ ಮಕ್ಕಳಿಗೆ ಶ್ಯೆಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಶಾಲಾ ಶುಲ್ಕ,ಆರೋಗ್ಯ ರಕ್ಷಣೆಗೆ ನೆರವು ನೀಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ತಮಟೆ ಕಲಾವಿದರಿಗೆ ಯಾವುದೇ ರೀತಿಯ ಅನುಕೂಲಗಳಿಲ್ಲ. ಈ ನಿಟ್ಟಿನಲ್ಲಿ ಕಲಾವಿದರು ಸಂಘಟಿತರಾಗಿ ಹೋರಾಟ ನಡೆಸಬೇಕೆಂದು ಕರೆ ನೀಡಿದರು. ಲಭಿಸಿಲ್ಲ.

ಕನಿಷ್ಠ ಪಕ್ಷ ಕಲಾವಿದರಿಗೆ ಮೊದಲು ಗುರುತಿನ ಚೀಟಿ ನೀಡಿ ನೆರೆ ರಾಜ್ಯಗಳ ಮಾದರಿಯಲ್ಲಿ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇಲ್ಲದಿದ್ದ ಪಕ್ಷದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್.ಡಿ.ಮೂರ್ತಿ ಮಾತನಾಡಿ, ಪ್ರತಿ ಹಳ್ಳಿಯಲ್ಲಿ ತಮಟೆ ಕಲಾವಿದರನ್ನು ಗುರುತಿಸಿ ಸಂಘಟನೆಯನ್ನು ಬಲಪಡಿಸಲು ನೂತನ ಪದಾಧಿಕಾರಿಗಳು ಶ್ರಮಿಸಬೇಕೆಂದರು.

ನಾಡೋಜ ಪಿಂಡಪಾಪನಹಳ್ಳಿ ಮುನಿವೆಂಕಟಪ್ಪ, ತಮಟೆ ಕಲಾವಿದರ ಒಕ್ಕೂಟದ ಜಿಲ್ಲಾಧ್ಯಕ್ಷ ಆನಂದ್,ಉಪಾಧ್ಯಕ್ಷ ಮೂರ್ತಿ, ಪ್ರಧಾನ ಕಾರ್ಯದರ್ಶಿ ಸುನೀಲ್, ನಗರಸಭಾ ಸದಸ್ಯ ಕೃಷ್ಣಮೂರ್ತಿ, ಕಲಾವಿದ ಈಧರೆ ಪ್ರಕಾಶ್, ತಾಲ್ಲೂಕು ತಮಟೆ ಕಲಾವಿದರ ಒಕ್ಕೂಟದ ಹಂಡಿಗನಾಳ ಮಾದೇಶ್, ಇ-ತಿಮ್ಮಸಂದ್ರ ಕಿರಣ್, ಶಿಡ್ಲಘಟ್ಟ ನಗರದ ಮಂಜು ಹಾಜರಿದ್ದರು.

error: Content is protected !!